ಸುಳ್ಯದ ಮುಖ್ಯರಸ್ತೆ ಶ್ರೀರಾಮ್ ಪೇಟೆಯಿಂದ ನಗರ ಪಂಚಾಯತ್ ಕಚೇರಿಯ ರಸ್ತೆಗೆ ತಿರುವು ಪಡೆಯುವಲ್ಲಿ ಕಳೆದ ಹಲವಾರು ತಿಂಗಳುಗಳಿಂದ ರಸ್ತೆ ಮಧ್ಯದಲ್ಲಿ ಹೊಂಡ ನಿರ್ಮಾಣಗೊಂಡು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದೇ ಹೊಂಡ ಕಳೆದ ಒಂದು ವರ್ಷಕ್ಕೆ ಮೊದಲು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.
ಬಳಿಕ ಇಲ್ಲಿ ತೇಪೆ ಕಾರ್ಯ ನಡೆದು ಇತ್ತೀಚೆಗೆ ಬಂದ ಮಳೆಯಿಂದಾಗಿ ಮತ್ತೆ ಅದೇ ಜಾಗದಲ್ಲಿ ಹೊಂಡ ನಿರ್ಮಾಣವಾಗಿ ವಾಹನ ಸವಾರರು ಮತ್ತೆ ಕಿರಿಕಿರಿ ಅನುಭವಿಸುವಂತಾಗಿದೆ.
ನಗರ ಪಂಚಾಯತ್ ಕಚೇರಿಯ ಕೂಗಳತೆಯಲ್ಲಿರುವ ಈ ಸಮಸ್ಯೆ ಸಂಬಂಧಪಟ್ಟ ಅಧಿಕಾರಿಗಳ ಜನಪ್ರತಿನಿಧಿಗಳ ಗಮನಕ್ಕೆ ಬಾರದೇ ಇರುವುದು ವಿಪರ್ಯಾಸವೆಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ. ಮತ್ತು ಕೂಡಲೆ ಕ್ರಮವಹಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.