ಒಕ್ಕಲಿಗ ಗೌಡ ಸಂಘ ಸುಳ್ಯ ಬೆಳ್ಳಾರೆ ವತಿಯಿಂದ ಸನ್ಮಾನ- ಧನಸಹಾಯ ಹಸ್ತಾಂತರ
ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ಬೆಳ್ಳಾರೆ ಕೆಪಿಎಸ್ ವಿದ್ಯಾರ್ಥಿಗಳಾದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ , ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಕ್ರೀಡಾಧಿಕಾರಿಯಾದ ಶ್ರೀಮತಿ ಪುಷ್ಪಾವತಿ ಇವರನ್ನು ಒಕ್ಕಲಿಗ ಗೌಡ ಸಂಘ ಸುಳ್ಯ ಬೆಳ್ಳಾರೆ ವತಿಯಿಂದ ಬೆಳ್ಳಾರೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದಲ್ಲಿ ಜ.18 ರಂದು ಸನ್ಮಾನಿಸಲಾಯಿತು.
ಬಳಿಕ ದೆಹಲಿಯಲ್ಲಿ ನಡೆಯಲಿರುವ ಖೇಲೋ ಇಂಡಿಯ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರೂ.25 ಸಾವಿರ ಮೊತ್ತದ ಚೆಕ್ಕನ್ನು ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಆರ್ಥಿಕ ಸಹಾಯವಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರ್,ಸಲಹಾ ಸಮಿತಿ ಸದಸ್ಯರಾದ ಪದ್ಮನಾಭ ಬೀಡು,ಕೂಸಪ್ಪ ಗೌಡ ಮುಗುಪ್ಪು,ಎಲ್ಯಣ್ಣ ಗೌಡ ಕುಳ್ಳಂಪಾಡಿ,ರವೀಂದ್ರ ಮರಕ್ಕಡ,ಕಮಲಾವತಿ,ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಧರ್ಮರಾಜ್,ಶಾಖಾಧಿಕಾರಿ ಕಾರ್ತಿಕ್,ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ , ಶಾಂತಾರಾಮ ಕಣಿಲೆಗುಂಡಿ,ಭರತ್ ಕೊಂಪುಳಿ,ಶ್ರೀನಾಥ್ ಬಾಳಿಲ, ಪ್ರಸಾದ್ ಕತ್ಲಡ್ಕ,ಸುರೇಶ್ ಶುಂಠಿತ್ತಡ್ಕ,ಗಣೇಶ್ ಕುಳ್ಳಂಪಾಡಿ ,ಮಹಾಬಲ ಗೌಡ,ಪ್ರಶಾಂತ್ ತಂಟೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ವಸಂತ ಉಲ್ಲಾಸ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.