ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ “ಯುವ ದಿನ” ಆಚರಣೆ

0

ಸ್ವಾಮಿ ವಿವೇಕಾನಂದರು ಸಮಾಜ ಮತ್ತು ಯುವಜನತೆಗೆ ನೀಡಿರುವ ಅಪಾರ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕಿರು ಪ್ರಹಸನದ ಮೂಲಕ ಪ್ರದರ್ಶಿಸಿದರು. ಐದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ವಿಭಿನ್ನ ರೀತಿಯ ಅನುಪಯುಕ್ತ ವಸ್ತುಗಳಿಂದ ಉಪಯುಕ್ತ ಮಾದರಿಗಳನ್ನು ತಯಾರಿಸಿ ಪರಿಸರವನ್ನು ಕಾಪಾಡುವುದರಲ್ಲಿ ಯುವ ಜನತೆಯ ಪಾತ್ರವನ್ನು ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶೋಭಾ ಕಿಶೋರ್ ರವರು ಯುವಜನತೆಯು ನಮ್ಮ ದೇಶದ ಅತ್ಯಂತ ಅಮೂಲ್ಯವಾದ ಸಂಪತ್ತು. ಹಾಗಾಗಿ ನಮ್ಮ ದೇಶದ ಏಳಿಗೆಗಾಗಿ ನಾವು ಪಾತ್ರರಾಗಬೇಕು ಎಂದು ನೋಡಿದರು.ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್ ಶಿಕ್ಷಕರು ವಿದ್ಯಾರ್ಥಿಗಳು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.