ನಿವೃತ್ತ ಉಪ ಪ್ರಾಂಶುಪಾಲ ಮಾಧವ ಗೌಡ ಗುಡ್ಡೆಮನೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಉಪಪ್ರಾಂಶುಪಾಲ ಮಾಧವ ಗೌಡ ಗುಡ್ಡೆಮನೆ ಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರರಾದ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಉದ್ಯೋಗಿ ಅರುಣಾಕುಮಾರ್ ಗುಡ್ಡೆಮನೆ, ಉಪನ್ಯಾಸಕ ಕಿರಣ್ ಕುಮಾರ್ ಗುಡ್ಡೆಮನೆ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.