ತನ್ನ ನಿರಂತರ ಸಮಾಜಮುಖಿ ಕಾರ್ಯ ,ಸೇವೆಗಳಿಂದ ಮಾದರಿಯಾಗಿರುವ ಶ್ರೀ ಭಗವಾನ್ ಸಂಘ (ರಿ) ಚೆಂಬು ಇವರು ಸಂಪಾಜೆಯ ಅಶಕ್ತ ಮಹಿಳೆ ಶ್ರೀಮತಿ ರಝಿಯಾರವರಿಗೆ ಗಾಲಿಕುರ್ಚಿನೀಡುವ ಮೂಲಕ ಹೊಸ ಚೈತನ್ಯ ನೀಡಿದ್ದಾರೆ.
ಸಂಪಾಜೆ ಗ್ರಾಮದ ಗೇಟ್ ಬಳಿ ನಿವಾಸಿ ಲತೀಫ್ ರವರ ಪತ್ನಿ ಶ್ರೀಮತಿ ರಝಿಯಾರವರು ಕಳೆದ ಐದು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ,ಹಾಸಿಗೆಯಿಂದ ಎದ್ದು ಓಡಾಡದ ಸ್ಥಿತಿಯಲ್ಲಿದ್ದು,ಸಹೃದಯರ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಶ್ರೀಮತಿ ರಝಿಯಾರವರಿಗೆ ಶ್ರೀ ಭಗವಾನ್ ಸಂಘ ಒದಗಿಸಿದ ಗಾಲಿಕುರ್ಚಿಯನ್ನು ಇಂದು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘದ ಉಪಾದ್ಯಕ್ಷ ರಾಜಾರಾಮ ಕಳಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷ ಶರತ್ ಕಾಸ್ಪಾಡಿ, ಕಾರ್ಯದರ್ಶಿ ಹರ್ಷಿತ್ ನೆಲ್ಲಿಪುಣಿ ,ಸೊಸೈಟಿ ನಿರ್ದೇಶಕರಾದ ಯಶವಂತ ದೇವರಗುಂಡ ,ಸಂಪಾಜೆ ಶ್ರೀ ಶಿರಾಡಿ ದೈವಸ್ಥಾನದ ಅದ್ಯಕ್ಷ ರಾಮಕೃಷ್ಣ ಕುಕ್ಕಂದೂರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.