ಅಧ್ಯಕ್ಷರಾಗಿ ವಾಸುದೇವ ಗೌಡ ಅಲೆಂಗಾರ, ಉಪಾಧ್ಯಕ್ಷರಾಗಿ ಶಿವರಾಮ ಚಾಮೆತ್ತಡ್ಕ
ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ವಾಸುದೇವ ಗೌಡ ಅಲೆಂಗಾರ , ಉಪಾಧ್ಯಕ್ಷರಾಗಿ ಶಿವರಾಮ ಚಾಮೆತ್ತಡ್ಕ ಅವಿರೋಧ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ನಿರ್ದೇಶಕರುಗಳ ಆಯ್ಕೆ ಕೂಡ ಅವಿರೋಧವಾಗಿ ಆಗಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲ ಒಂದು ನಾಮಪತ್ರ ಸಲ್ಲಿಕೆಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ಕಾರ್ಯಪ್ಪ ಗೌಡ ಅಳಕೆ, ಲಕ್ಷ್ಮೀನಾರಾಯಣ ನಡ್ಕ,
ಬಾಲಕೃಷ್ಣ ಗೌಡ ಕುಳ್ಸಿಗೆ,ಬೆಳ್ಯಪ್ಪ ಗೌಡ ದೇರೆಟಿ, ರಾಮಚಂದ್ರ ರೈ ಕಲ್ಲೇರಿ, ಸತೀಶ್ ಮೇಲ್ಪಾಡಿ, ಮುತ್ತಪ್ಪ ಗೌಡ ಕುಳ್ಸಿಗೆ,ನಾರಾಯಣ ಪುಚ್ಚಮ್ಮ, ಶ್ರೀಮತಿ ಭವಾನಿ ಆಕ್ರಿಕಟ್ಟೆ, ಶ್ರೀಮತಿ ನಂದಿನಿ ಆಕ್ರಿಕಟ್ಟೆ ಉಪಸ್ಥಿತರಿದ್ದರು.ರಿಟರ್ನಿಂಗ್ ಅಧಿಕಾರಿಯಾಗಿ ಶಿವಲಿಂಗಯ್ಯ ಎಂ ಚುನಾವಣೆ ಕರ್ತವ್ಯ ನಿರ್ವಹಿಸಿ ಉಪಸ್ಥಿತರಿದ್ದರು .
ಸಂಘದ ಪೂರ್ವಾಧ್ಯಕ್ಷರು ಮತ್ತು ಹಾಲಿ ನಿರ್ದೇಶಕರಾದ ಲಕ್ಷ್ಮೀನಾರಾಯಣ ನಡ್ಕ ಮತ್ತು ಕಾರ್ಯಪ್ಪ ಗೌಡ ಆಕ್ರಿಕಟ್ಟೆ ಶುಭ ಹಾರೈಸಿದರು.
ಕಾರ್ಯದರ್ಶಿ ಶ್ರೀಮತಿ ತೀರ್ಥಾ ಡಿ ಸ್ವಾಗತಿಸಿದರು ಮತ್ತು ವಂದಿಸಿದರು.