ಮರ್ಕಂಜ : ಸ್ಕೂಟರ್‌ನಲ್ಲಿ ಅಕ್ರಮ ಮದ್ಯ ಸಾಗಾಟ, ಆರೋಪಿ ಪೊಲಿಸ್ ವಶಕ್ಕೆ

0


ಅಕ್ರಮವಾಗಿ ಮದ್ಯ ಸಾಗಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮರ್ಕಂಜದಿಂದ ಜ. ೧೮ರಂದು ವರದಿಯಾಗಿದೆ.
ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಪೊಲೀಸ್ ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿದ್ದ ಸಂದರ್ಭ ಮರ್ಕಂಜ ಸೇತುವೆ ಬಳಿ ಕೆಎ ೨೧ ಇ ಎ ೫೨ ೫೩ ನೋಂದಣಿಯ ಡಿಯೋ ಸ್ಕೂಟರನ್ನು ಚಲಾಯಿಸಿಕೊಂಡು ಬರುತ್ತಿದ್ದ ಮರ್ಕಂಜ ನಿವಾಸಿ ದಯಾನಂದ ಎಂಬುವರನ್ನು ತಡೆದು ನಿಲ್ಲಿಸಿ ವಾಹನ ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಿಗೆ ಇಲ್ಲದ ೧೮೦ ಎಂಎಲ್ ನ ೩೫ ವಿಸ್ಕಿ ಸ್ಯಾಚೆಟ್ ಪ್ಯಾಕೆಟ್‌ಗಳು ೯೦ ಎಂಎಲ್ ನ ೧೦ಸ್ಯಾಚೆಟ್ ಪ್ಯಾಕೆಟ್ ಗಳು ಪತ್ತೆಯಾಗಿದೆ. ಆರೋಪಿ ಮತ್ತು ಒಟ್ಟು ೩,೨೦೮ ರೂಪಾಯಿ ಮೌಲ್ಯದ ೭.೨೦೦ ಲೀಟರ್ ನ ಅಕ್ರಮ ಮಧ್ಯ ಮತ್ತು ದ್ವಿಚಕ್ರವಾಹನವನ್ನು ವಶಪಡಿಸಿಕೊಂಡ ಪೊಲೀಸರು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ ಕ್ರಂ ೧೧/೨೦೨೪ ಕಲಂ ೩೨. ೩೪.೪೩ ಅಬಕಾರಿ ಕಾಯ್ದೆ ೧೯೬೫ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.