ಕಳಂಜ ಗ್ರಾಮದ ಅಯ್ಯನಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಗೋಕುಲ ಸಂಕೀರ್ಣದಲ್ಲಿ ಡಾ. ಕಿಶನ್ ರಾವ್ ಬಾಳಿಲ ಇವರ ನೇತೃತ್ವದಲ್ಲಿ ಡಾ. ಎನ್. ಗೋಪಾಲಕೃಷ್ಣಯ್ಯ (N.G.K.) ಸ್ಮಾರಕ
ನಮ್ಮ ಆರೋಗ್ಯಧಾಮ
ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ಜ. 21ರಂದು ಪೂ. 10.00 ಗಂಟೆಯಿಂದ ಉದ್ಘಾಟನೆಗೊಳ್ಳಲಿದೆ. ಕುಟುಂಬ ವೈದ್ಯರ ಸಂಘ, ಮಂಗಳೂರು ಇದರ ಕಾರ್ಯದರ್ಶಿ ಡಾ| ಜಿ. ಕೆ. ಭಟ್ ಸಂಕಬಿತ್ತಿಲು ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ| ಮುರಲೀಮೋಹನ ಚೂಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ತಾಲೂಕು ಆರೋಗ್ಯಾಧಿಕಾರಿ
ಡಾ| ನಂದಕುಮಾರ್ ಬಿ, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ಸಂಚಾಲಕರಾದ ಶ್ರೀ ಎಂ. ಪಿ. ಉಮೇಶ್, ಕೆಯ್ಯೂರು ಶ್ರೀ ದೇವಿ ಕ್ಲಿನಿಕ್ ನ ವೈದ್ಯರಾದ ಡಾ| ಶಿವಪ್ರಸಾದ್ ಶೆಟ್ಟಿ
ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಡಾ. ಕಿಶನ್ ರಾವ್ ಬಾಳಿಲ ಮತ್ತು ಮನೆಯವರಾದ ರಾಮಚಂದ್ರ ರಾವ್ ಬಿ. ಶ್ರೀಮತಿ ವೀಣಾ ಬಾಳಿಲ ಮುರಳೀಧರ ಎಚ್.ಜಿ. ಶ್ರೀಮತಿ ಸುಕ್ಷಿತಾ ರಾವ್ ಶ್ರೀಮತಿ ಸೌಮ್ಯಶ್ರೀ ಆಹ್ವಾನಿಸಿದ್ದಾರೆ.
ಪೂರ್ವಾಹ್ನ 11-00 ರಿಂದ 1.00ರ ತನಕ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಮಂಗಳೂರು, ಪುತ್ತೂರು ಮತ್ತು ಬೆಂಗಳೂರಿನ ವಿವಿಧ ವಿಭಾಗಗಳ ಹಿರಿಯ ತಜ್ಞ ವೈದ್ಯರುಗಳು ಆಗಮಿಸಿ ಸುಮಾರು 2500ರಷ್ಟು ಅಂದಾಜು ವೆಚ್ಚದ ಬ್ಲಡ್ ಶುಗರ್, ಬಿಪಿ, ಬೋನ್ ಮಾಸ್ ಡೆನ್ಸಿಟಿ, ಇಸಿಜಿ, ರಿಫ್ರಾಕ್ಷನ್ ಮತ್ತಿತರ ಆರೋಗ್ಯ ತಪಾಸಣೆಗಳನ್ನು, ಉಚಿತವಾಗಿ ಮಾಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ಎಂದು ಡಾ| ಕಿಶನ್ ರಾವ್ ಬಾಳಿಲ ತಿಳಿಸಿದ್ದಾರೆ. ನಮ್ಮ ಆರೋಗ್ಯಧಾಮದಲ್ಲಿ ತಜ್ಞ ವೈದ್ಯಕೀಯ ಸಲಹೆ, ವೈಯುಕ್ತಿಕ ಸಮಾಲೋಚನೆ, ಡೇ-ಕೇರ್ ಚಿಕಿತ್ಸೆ, ತುರ್ತು ಚಿಕಿತ್ಸೆ, ಪ್ರಾಥಮಿಕ ಚಿಕಿತ್ಸೆ, ಶಸ್ತ್ರಚಿಕಿತ್ಸಾ ಕೊಠಡಿ, ಕ್ಲಿನಿಕಲ್ ಲ್ಯಾಬೋರೇಟರಿ, ಔಷಧಿಗಳು, ಫಿಸಿಯೋಥೆರಪಿ, ಅಂಬ್ಯುಲೆನ್ಸ್ ಸರ್ವೀಸ್ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.