ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವರ ಜಾತ್ರೋತ್ಸವ,ಬ್ರಹ್ಮರಥೋತ್ಸವ

0

ಶತಮಾನಗಳ ಬಳಿಕ ನಡೆದ ಬ್ರಹ್ಮರಥೋತ್ಸವ – ಕಣ್ತುಂಬಿಕೊಂಡ ಭಕ್ತ ಸಮೂಹ

ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ಬ್ರಹ್ಮರಥೋತ್ಸವವು ಶತಮಾನಗಳ ಬಳಿಕ ಭಕ್ತಾದಿಗಳ ಅಭೀಷ್ಟದಂತೆ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವವು ಜ.19 ರಂದು ರಾತ್ರಿ ನಡೆಯಿತು. ಶತಮಾನಗಳ ಬಳಿಕ ನಡೆದ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವನ್ನು ಭಕ್ತ ಸಮೂಹವೆ ಕಣ್ತುಂಬಿಕೊಂಡಿತು.

ಊರ-ಪರವೂರ ಸಾವಿರಾರು ಭಕ್ತಾದಿಗಳು ರಥಾರೂಢರಾದ ಶ್ರೀ ಜಲದುರ್ಗಾದೇವಿಯ ದರ್ಶನ ಪಡೆದು ಕೃತಾರ್ಥರಾದರು. ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ವ್ಯಾಘ್ರಚಾಮುಂಡಿ ದೈವ (ಪಿಲಿಭೂತ)ದ ಭಂಡಾರ ಬಂದು ಶ್ರೀ ದೇವರ ಬ್ರಹ್ಮರಥೋತ್ಸವ ನೆರವೇರಿತು. ನಂತರ ಪೆರುವಾಜೆ ಬೆಡಿ ನಡೆಯಿತು.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು, ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳೀನ್ ಕುಮಾರ್ ಕಟೀಲು, ಶಾಸಕಿ ಕು| ಭಾಗೀರಥಿ ಮುರುಳ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ.ಪದ್ಮನಾಭ ಶೆಟ್ಟಿ, ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ ಕುಮಾರಮಂಗಲ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾ‌ರ್, ಪಿ. ವೆಂಕಟಕೃಷ್ಣ ರಾವ್, ಪಿ. ಜಗನ್ನಾಥ ರೈ, ನಾರಾಯಣ ಕೆ., ಶ್ರೀಮತಿ ಯಶೋದ ಎ. ಎಸ್., ಜಯಪ್ರಕಾಶ್ ರೈ ಬಿ., ದಾಮೋದರ ನಾಯ್ಕ, ಶ್ರೀಮತಿ ಭಾಗ್ಯಲಕ್ಷ್ಮೀ, ದೇವಸ್ಥಾನದ ಕಛೇರಿ ವ್ಯವಸ್ಥಾಪಕ ವಸಂತ ಪೆರುವಾಜೆ ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.


ರಥೋತ್ಸವ ನಡೆದ ಬಳಿಕ ಮಹಾಪೂಜೆ, ಶಯನೋತ್ಸವ, ಕವಾಟ ಬಂಧನ ನೆರವೇರಿತು.