ವಿ.ಟಿ.ಯು. ಬೆಳಗಾವಿ ಇದರ ಕಾರ್ಯಕಾರಿ ಮಂಡಳಿ ಹಾಗೂ ವಿವಿಧ ಸಮಿತಿಗಳಿಗೆ ನೇಮಕಗೊಂಡು ಪ್ರಸಕ್ತ ಸಾಲಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರುಗಳು

0

ಡಾ. ಉಜ್ವಲ್ ಯು.ಜೆ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ/ವಿಭಾಗ ಮುಖ್ಯಸ್ಥರು – ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇದರ ಕಾರ್ಯಕಾರಿ ಮಂಡಳಿ ಸದಸ್ಯರಾಗಿ, ಮಾಲ್ ಪ್ರಾಕ್ಟೀಸ್ ಕೇಸಸ್ ಕನ್ಸಿಡರೇಶನ್ ಕಮಿಟಿ (MPCC) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೆ, ಇವರು ವಿ.ಟಿ.ಯು ಎಲ್.ಐ.ಸಿ. ಚೇರ್‌ಮೆನ್ ಆಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿರುತ್ತಾರೆ.

ವಿ.ಟಿ.ಯು. ಬೋರ್ಡ್ ಆಫ್ ಸ್ಟಡೀಸ್ ಮತ್ತು ಬೋರ್ಡ್ ಆಫ್ ಎಕ್ಸಾಮಿನರ್ಸ್ ಸಮಿತಿಗಳಿಗೆ ಡಾ. ಸುರೇಶ ವಿ, ಪ್ರಾಂಶುಪಾಲರು ಹಾಗೂ ಡಾ. ಶ್ರೀಧರ್ ಕೆ. ಉಪಪ್ರಾಂಶುಪಾಲ, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರು, ಡೀನ್ ಸ್ಟುಡೆಂಟ್ ಅಫೇರ್ಸ್ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ವಿ.ಟಿ.ಯು. ಬೋರ್ಡ್ ಆಫ್ ಎಕ್ಸಾಮಿನರ್ಸ್(BOE) ಸಮಿತಿಗಳಿಗೆ ಡಾ. ಸವಿತಾ ಸಿ.ಕೆ., ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ/ಡೀನ್ ರೀಸರ್ಚ್, ಡಾ. ಪ್ರವೀಣ ಎಸ್.ಡಿ. ಫಿಸಿಕ್ಸ್ ವಿಭಾಗ ಮುಖ್ಯಸ್ಥರು/ಡೀನ್ ಎಕ್ಸಾಮಿನೇಶನ್ ಹಾಗೂ ಡಾ. ಭಾಗ್ಯಜ್ಯೋತಿ ಕೆ.ಎಲ್., ಅಸೋಸಿಯೇಟ್ ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.