ಹರಿಹರ ಪಲ್ಲತಡ್ಕ: ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

0

ಲಯನ್ಸ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಕೆ ವಿ ಜಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ, ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತ್ತಡ್ಕ, ಸಚಿನ್ ಕ್ರೀಡಾ ಸಂಘ ರಿ. ಹರಿಹರ ಪಲ್ಲತ್ತಡ್ಕ, ವಿಶ್ವ ಯುವಕ ಮಂಡಲ ಬಾಳುಗೋಡು, ಸರ್ವೋದಯ ಯುವಕ ಮಂಡಲ ಕಲ್ಮಕಾರು ಇವರ ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜ.21 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸುಬ್ರಹ್ಮಣ್ಯ ಲಯನ್ಸನ ಅದ್ಯಕ್ಷರಾದ ರಾಮಚಂದ್ರ ಪಳಂಗಾಯ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದ ಉದ್ಘಾಟನೆಯನ್ನು ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರಾದ ಕಿಶೋರ್ ಕೂಜುಗೋಡು ನೆರವೇರಿಸಿದರು.
ಅತಿಥಿಗಳಾಗಿ ಕೆವಿಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೆ ವಿ ಚಿದಾನಂದ, ಡಾ. ಚಂದ್ರಶೇಖರ ಕಿರಿಭಾಗ, ಡಾ.ಕುಲದೀಪ್, ರಂಗಯ್ಯ ಶೆಟ್ಟಿಗಾರ್, ವಿಮಲ ರಂಗಯ್ಯ, ಸತೀಶ್ ಕೂಜುಗೋಡು, ಚಂದ್ರಶೇಖರ ಪಾನತ್ತಿಲ, ವಿಜಯ ಅಂಗಣ, ಶ್ರೀಮತಿ ಜಯಶ್ರೀ ಚಾಂತಾಳ, ಪ್ರದೀಪ್ ಕಜ್ಜೋಡಿ, ರಾಜೇಶ್ ಕಿರಿಭಾಗ, ಡ್ಯಾನಿ ಯಲದಾಳು ಉಪಸ್ಥಿತರಿದ್ದರು.

ವರದಿ: ಕುಶಾಲಪ್ಪ ಕಾಂತುಕುಮೇರಿ