ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಶಾಫಿ ಕುತ್ತಮೊಟ್ಟೆ ಪುನರಾಯ್ಕೆಯಾಗಿದ್ದಾರೆ.
ಇಂಟೆಕ್ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿಯವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಧ್ಯಕ್ಷರಾದ ಮನೋಹರ್ ಶೆಟ್ಟಿಯವರು ನೇಮಕಗೊಳಿಸಿ ಆದೇಶ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಶಾಫಿಯವರು ಯೂತ್ ಕಾಂಗ್ರೆಸ್ ನಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರು. 2020ರಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷರಾಗಿ ನೇಮಗೊಂಡರು. ಇದೀಗ ಮುಂದಿನ ಮೂರು ವರ್ಷಗಳ ಅವಧಿಗೆ, ಎರಡನೇ ಬಾರಿಗೆ ಶಾಫಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸುಳ್ಯದಲ್ಲಿ ಉದ್ಯಮಿಯಾಗಿರುವ ಶಾಫಿ ಕುತ್ತಮೊಟ್ಟೆ, ನಾವೂರು ನಿವಾಸಿ, ಉದ್ಯಮಿ ಅಬ್ದುಲ್ ಖಾದರ್ ಕುತ್ತಮೊಟ್ಟೆ ಹಾಗೂ ಶ್ರೀಮತಿ ಸಾರಾ ದಂಪತಿಗಳ ಪುತ್ರ. ಸುಳ್ಯ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ಸಹೋದರ.