ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉದ್ಘಾಟನಾ ಸಮಾರಂಭ ನಡೆಯಿತು.
ಧ್ವಜಾರೋಹಣ ವನ್ನು ಶಾಲಾ ಸಂಚಾಲಕ ಜಾಕೆ ಸದಾನಂದ ನೆರವೇರಿಸಿ, ಬಳಿಕ ಸ್ಕೌಟ್ಸ್- ಗೈಡ್ಸ್ ನ್ನು ದೀಪಬೆಳಗಿಸಿ ಉದ್ಘಾಟಿಸಿದರು.
ಶಿಕ್ಷಕ ಕುಮಾರ್ ಲಮಾಣಿ ಗಣರಾಜ್ಯೋತ್ಸವ ಮತ್ತು ಸ್ಕೌಟ್ಸ್ ಗೈಡ್ಸ್ ಬಗ್ಗೆ ಮಾತನಾಡಿದರು.
ವೇದಿಕೆಯನ್ನು ಮುಖ್ಯ ಶಿಕ್ಷಕಿ ಜಯಲತಾ ಕೆ.ಆರ್ ಇದ್ದರು. ಶಿಕ್ಷಕರಾದ ಶಿವಪ್ರಕಾಶ್.ಕೆ, ಸವಿತಾ ಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್.ಕೆ, ಸಿಬ್ಬಂದಿ ಬೇಬಿ.ಕೆ ಕಾರ್ಯಕ್ರಮ ಕ್ಕೆ ಸಹಕರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನಡೆಯಿತು. ಶಿಕ್ಷಕ ಶಿವಪ್ರಕಾಶ್.ಕೆ ವಂದಿಸಿ,
ಶಿಕ್ಷಕಿ ಮೀನಕುಮಾರಿ.ಕೆ ಕಾರ್ಯಕ್ರಮ ನಿರೂಪಿಸಿದರು.