ಫೆ.1: ಧ್ವಜಾರೋಹಣ,
ಫೆ.5: ಹಗಲು ದರ್ಶನ ಬಲಿ,
ಫೆ.6: ರಾತ್ರಿ ಬ್ರಹ್ಮರಥೋತ್ಸವ
ಪಂಜ ಸೀಮೆ ದೇವಾಲಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯ ಕ್ರಮಗಳೊಂದಿಗೆ ಜ.24 ರಿಂದ ಫೆ.9 ರ ತನಕ ವಿಜೃಂಭಣೆಯಿಂದ ನಡೆಯಲಿದೆ.
ಫೆ.1 ರಂದು ಸಂಜೆ ತಂತ್ರಿ ಆಗಮನ.ರಾತ್ರಿ ಗಂಟೆ 7ಕ್ಕೆ ಧ್ವಜಾರೋಹಣ ನಡೆಯಲಿದೆ.
ಫೆ.2 ರಂದು ಬೆಳಿಗ್ಗೆ ಗಂಟೆ 7 ಕ್ಕೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ಶ್ರೀ ದೇವಾಲಯಕ್ಕೆ ತೀರ್ಥ ತರುವುದು.ಮಹಾ ಪೂಜೆ, ನಿತ್ಯಬಲಿ ನಡೆಯಲಿದೆ.
ಫೆ.3.ರಂದು ಮಹಾಪೂಜೆ , ನಿತ್ಯಬಲಿ ಸಂಜೆ ಹಸಿರು ಕಾಣಿಕೆ ಮೆರವಣಿಗೆ ಪುತ್ಯ ಸತ್ಯಕಟ್ಟೆಯಿಂದ ಆರಂಭ ಗೊಂಡು ದೇವಳಕ್ಕೆ ಸಮರ್ಪಣೆ, ಉಗ್ರಾಣ ತುಂಬಿಸುವುದು.
ದಂಡಮಾಲೆ ಹಾಕಿ ಬಲಿ , ಬೇತಾಳಗಳು ಇಳಿಯುವುದು ನಡೆಯಲಿದೆ.
ಫೆ4. ರಂದು ಶ್ರೀ ದೇವರ ಉತ್ಸವ , ಮಹಾಪೂಜೆ, ಉತ್ಸವ ನಡೆಯಲಿದೆ.
ಫೆ.5 ರಂದು ಪೂರ್ವಾಹ್ನ ಶ್ರೀ ದೇವರ ಬಲಿ ಹೊರಟು ಪೂರ್ವಾಹ್ನ ಗಂಟೆ 10.30 ರಿಂದ ಶ್ರೀ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ, ರಾತ್ರಿ ದೀಪೋತ್ಸವ , ಮಹಾಪೂಜೆ ,ಶ್ರೀ ದೇವರ ಬಲಿ ಹೊರಟು ವಸಂತಕಟ್ಟೆ ಪೂಜೆ, ಶಿರಾಡಿ ,ರುದ್ರ ಚಾಮುಂಡಿ ಮತ್ತು ಕಾಚುಕುಜುಂಬ ದೈವಗಳ ನರ್ತನ ಸೇವೆ ನಡೆಯಲಿದೆ.
ಫೆ.6.ರಂದು ಮುಂಜಾನೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಹಾಪೂಜೆ .ರಾತ್ರಿ ಗಂಟೆ 9.30 ಕ್ಕೆ ಶ್ರೀ ದೇವರ ಬ್ರಹ್ಮರಥೋತ್ಸವ, ಕಾಜು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ,ಶ್ರೀ ಭೂತಬಲಿ ,ಶಯನೋತ್ಸವ, ಕವಟ ಬಂಧನ ಜರುಗಲಿದೆ..
ಫೆ.7.ರಂದು ಕವಾಟೋದ್ಜಾಟನೆ ದೇವರಿಗೆ ಅಭಿಷೇಕ . ಬೆಳಿಗ್ಗೆ ಗಂಟೆ 9 ರಿಂದ ಬಲಿ ಹೊರಟು ಅವಭೃತ ಸ್ನಾನ ,ಧ್ವಜಾವರೋಹಣ , ಮಹಾಪೂಜೆ ಜರುಗಲಿದೆ.
ಸಂಜೆ ದೇಗುಲದಿಂದ ಶ್ರೀ ಕಾಚುಕುಜುಂಬ, ಉಳ್ಳಾಕುಲು ದೈವಗಳ ಭಂಡಾರ ವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿ ಬೈಲಿಗೆ ಹೋಗಿ ಧ್ವಜಾರೋಹಣ , ಶ್ರೀ ಕಾಚುಕುಜುಂಬ ದೈವದ ನೇಮ ಜರುಗಲಿದೆ.
ಫೆ.8 ರಂದು ಮುಂಜಾನೆ ಗರಡಿ ಬೈಲಿನ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಹಾಗೂ ಶ್ರೀ ಉಳ್ಳಾಕುಲು ದೈವದ ನೇಮ ,ಪ್ರಸಾದ ವಿತರಣೆ , ಧ್ವಜಾವರೋಹಣ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ ,ಮಹಾಪೂಜೆ ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ಜರುಗಲಿದೆ. ರಾತ್ರಿ ಶಿರಾಡಿ ದೈವದ ಬಂಡಾರ ಬರುವುದು.ಫೆ.9.ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ಜರುಗಲಿದೆ.
ಫೆ.22 ರಂದು ರಾತ್ರಿ ರಂಗ ಪೂಜೆ ಬೀದಿ ನೇಮ,ಫೆ.23 ರಂದು ಆದಿಬೈದೆರುಗಳ ನೇಮೋತ್ಸವ ಜರುಗಲಿದೆ. ಪ್ರತಿ ದಿನ ದೇವಳದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.
ವಿಶೇಷ ಆಕರ್ಷಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು:
ಫೆ .3. ರಂದು ಹಸಿರು ಕಾಣಿಕೆ ಮೆರವಣಿಗೆಯಲ್ಲಿ ಮತ್ತು ಫೆ.6. ರಾತ್ರಿ ಬ್ರಹ್ಮ ರಥೋತ್ಸವದ ವೇಳೆ ರಾಜ್ಯ ಪ್ರಶಸ್ತಿ ವಿಜೇತ ರಮೇಶ್ ಕಲ್ಲಡ್ಕ ರವರ ಶಿಲ್ಪ ಗೊಂಬೆ ಬಳಗದಿಂದ ಕೀಲು ಕುದುರೆ , ಕರಗನೃತ್ಯ,ಗೊಂಬೆಯಾಟ ಮತ್ತು ದೇವಳದ ಮೈದಾನದಲ್ಲಿ ಅನೇಕ ಭಜನಾ ತಂಡಗಳಿಂದ ಕುಣಿತ ಭಜನೆ, ಭಜನಾ ಸಂಕೀರ್ತನೆ ವಿಶೇಷ ಆಕರ್ಷಣೆಯಾಗಲಿದೆ.
ಫೆ1. ರಂದು ರಾತ್ರಿ ಗಂಟೆ 9.30 ರಿಂದ ಯಕ್ಷ ಮಿತ್ರರು ಪಂಜ ಇದರ ಆಶ್ರಯದಲ್ಲಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮಂಗಳೂರು ಇವರಿಂದ ಮುಗುರು ಮಲ್ಲಿಗೆ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ.
ಫೆ.2 ರಂದು ರಾತ್ರಿ ಗಂಟೆ 7 ರಿಂದ ಪ್ರಣತಿ ಚೈತನ್ಯ ಪದ್ಯಾನ ಮತ್ತು ಪದಯಾನ ತಂಡದವರಿಂದ ಭರತನಾಟ್ಯ ಪ್ರದರ್ಶನ ಗೊಳ್ಳಲಿದೆ.
ಜ.3 ರಂದು ರಾತ್ರಿ ಗಂಟೆ 7 ರಿಂದ ಡಾನ್ಸ್ & ಬೀಟ್ಸ್ ಪಂಜ ಮತ್ತು ಇತರ ಶಾಖೆಯ ಇದರ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಪ್ರದರ್ಶನ ಗೊಳ್ಳಲಿದೆ.
ಫೆ.5 ರಂದು ರಾತ್ರಿ ಗಂಟೆ 7 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ರವರಿಂದ ಕಾರುಣ್ಯಾಂಬುಧಿ ಶ್ರೀ ರಾಮ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ.