ಫೆ.3ರಂದು ಅರಂತೋಡಿನಲ್ಲಿ ಶೈಕ್ಷಣಿಕ ಶಿಬಿರ

0

ಶಾಲಾ ಶಿಕ್ಷಣ ಇಲಾಖೆ, ಸಿ.ಸಿ.ಆರ್.ಟಿ. ಬಳಗ ಸುಳ್ಯ ಹಾಗೂ ಹಿ.ಪ್ರಾ.ಶಾಲೆ ಅರಂತೋಡು ಇದರ ಸಹಯೋಗದಲ್ಲಿ ಶೈಕ್ಷಣಿಕ ಶಿಬಿರ ಫೆ.3ರಂದು ಅರಂತೋಡು ಶಾಲೆಯಲ್ಲಿ ‌ನಡೆಯಲಿದೆ.

ಶಿಬಿರದಲ್ಲಿ ಹಲವು‌ ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದು, ವಿಜ್ಞಾನ ಪ್ರಯೋಗಗಳು, ಸರಳ ಇಂಗ್ಲೀಷ್ ಕಲಿಕೆ, ವರ್ಲಿ ಆರ್ಟ್ಸ್, ಯೋಗ ವಿಜ್ಞಾನ, ಕಥಾ ಸಮಯ, ವಿವಿಧ ಭಾಷೆಯ ದೇಶಭಕ್ತಿಗೀತೆಗಳು, ಕ್ರಾಫ್ಟ್, ವಿಜ್ಞಾನ ವಿಶ್ವ, ವೇದಗಣಿತ, ಶಿಶುಗೀತೆಗಳು ಶೈಕ್ಷಣಿಕ ಶಿಬಿರದಲ್ಲಿ ಇರಲಿವೆ.