ಗುತ್ತಿಗಾರು : ಸೈoಟ್ ಮೇರಿಸ್ ಚರ್ಚ್ ನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭ

0

ಸೈoಟ್ ಮೇರಿಸ್ ಚರ್ಚಿನ ಜಾತ್ರಾ ಮಹೋತ್ಸವವು ಫೆ.2 ಆರಂಭ ಗೊಂಡಿತು.

ಅಂದು ಸಂಜೆ ಪವಿತ್ರ ಸ್ವರೂಪ ಪ್ರತಿಷ್ಠೆ, ಧ್ವಜಾರೋಹಣ, ದಿವ್ಯ ಬಲಿ‌ವಪೂಜೆ ನಡೆಯಿತು.

ಫೆ. 3ರಂದು ಸಾಯಂಕಾಲ 4.30 ಕ್ಕೆ ವಿಧಾನ ಪೂರ್ವಕ ದಿವ್ಯ ಬಲಿಪೂಜೆ ಹಾಗೂ ಪ್ರವಚನ ನಡೆಯಲಿದೆ. ಸಂಜೆ 6.45 ಕ್ಕೆ ಗುತ್ತಿಗಾರು ಕೆಳಗಿನ ಪೇಟೆಗೆ ವರ್ಣರಂಜಿತ ಮೆರವಣಿಗೆ ವಾದ್ಯ ಮೇಳಗಳೊಂದಿಗೆ ನಡೆಯಲಿದ್ದು ರಾತ್ರಿ
ಅನ್ನ ಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ “”ವಿಸ್ಮಯ 2k24” ನಡೆಯಲಿದೆ. ಫೆ.4 ರಂದು ಬೆಳಿಗ್ಗೆ ವಿಜೃಂಭಣೆಯ ರಾಸಾ ದಿವ್ಯ ಬಲಿಪೂಜೆಯೊಂದಿಗೆ, ಹಬ್ಬದ ಸಂದೇಶ ನಡೆದು ವಾರ್ಷಿಕ ಜಾತ್ರಾ ಮಹೋತ್ಸವ ಕೊನೆಗೊಳ್ಳಲಿದೆ.