ಪ್ರಾತ:ಕಾಲದಲ್ಲಿ ಆಗಮಿಸಿ ದೈವದ ನರ್ತನ ಸೇವೆ ಕಣ್ತುಂಬಿಕೊಂಡ ಭಕ್ತ ಸಮೂಹ
ಸುಳ್ಯದ ನಾವೂರಿನ ಕಾರಣಿಕ ಕ್ಷೇತ್ರ ಕಲ್ಕುಡ ದೈವಸ್ಥಾನದಲ್ಲಿ ಇಂದು ಪ್ರಾತ:ಕಾಲದಲ್ಲಿ
ಶ್ರೀ ಕಲ್ಕುಡ, ಕಲ್ಲುರ್ಟಿ ನೇಮೋತ್ಸವವು ಆರಂಭಗೊಂಡಿತು.
ಪ್ರಾತ:ಕಾಲದಲ್ಲಿ
ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ದೈವದ ನರ್ತನ ಸೇವೆಯನ್ನು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ಹಾಗೂ ಧರ್ಮದರ್ಶಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಕಲ್ಕುಡ ಕಲ್ಲುರ್ಟಿ ದೈವದ ನೇಮ ನಡೆದು ಪ್ರಸಾದ ವಿತರಣೆಯಾದ ಬಳಿಕ
ಶ್ರೀ ಗುಳಿಗ ದೈವದ ನೇಮೋತ್ಸವವು ನಡೆಯಲಿದೆ. ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು.