ಇಂದು ಸುಬ್ರಹ್ಮಣ್ಯದಲ್ಲಿ ರಾಜ್ಯ ಮಟ್ಟದ ಅರ್ಜುನ ಟ್ರೋಫಿ, ಮ್ಯಾಟ್ ಕಬಡ್ಡಿ

0

ಭಾಗಿಯಾಗಲಿರುವ ಸ್ವಾಮೀಜಿ, ಸಚಿವರು , ಸಾಧಕರಿಗೆ ಸನ್ಮಾನ

ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್,
ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್, ಕಡಬ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ‌ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸುಬ್ರಹ್ಮಣ್ಯ ಆಶ್ರಯದಲ್ಲಿ ಇಂದು (ಫೆ.4) ರಂದು ಎಸ್.ಎಸ್.ಪಿ.ಯು ಕಾಲೇಜಿನ ಮೈದಾನದಲ್ಲಿ ರಾಜ್ಯ ಮಟ್ಟದ ಮ್ಯಾಟ್ ಕಬ್ಬಡಿ ನಡೆಯಲಿದೆ.

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸುಬ್ರಹ್ಮಣ್ಯ ಇದರ ವತಿಯಿಂದ ಅನಾಥಾಶ್ರಮ ಕಟ್ಟಡ, ನಿರ್ಮಾಣದ ಸಹಾಯಾರ್ಥವಾಗಿ ರಾಜ್ಯ ಮಟ್ಟದ ಅರ್ಜುನ ಟ್ರೋಫಿ ಹೊನಲು ಬೆಳಕಿನ ಅಹ್ವಾನಿತ ತಂಡಗಳ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.

ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಇದಾಗಿದ್ದು ಸಂಜೆ ಆರಂಭವಾಗಲಿದೆ.
ಪಂದ್ಯಾಟದ ಪ್ರಥಮ ಬಹುಮಾನವಾಗಿ ₹50,000 ಮತ್ತು ಅರ್ಜುನ ಟ್ರೋಫಿ
ದ್ವಿತೀಯ ₹ 30,000 ಮತ್ತು ಅರ್ಜುನ ಟ್ರೋಫಿ, ತೃತೀಯ : 20,000 ಮತ್ತು ಅರ್ಜುನ ಟ್ರೋಫಿ ಹಾಗೂ ಚತುರ್ಥ : 20,000 ಮತ್ತು ಅರ್ಜುನ ಟ್ರೋಫಿ ಇರಲಿದೆ
ಇದಲ್ಲದೆ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಸವ್ಯಸಾಚಿ,ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಸಂಜೆ ಸಭಾ ಕಾರ್ಯಕ್ರಮ ಜರುಗಲಿದ್ದು ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಕು. ಭಾಗೀರಥಿ ಅಧ್ಯಕ್ಷೆ ವಹಿಸಲಿದ್ದಾರೆ.

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ‌ ಮಠದ ಶ್ರೀ ಗಳಾದ
ಡಾI ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ದೀಪ ಬೆಳಗಿಸಿ ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ‌ಸಭೆಯ ಸಭಾಪತಿ ಯು.ಟಿ. ಖಾದರ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡುರಾವ್, ವಿಧಾನ ಪರಿಷತ್ ಸದಸ್ಯರರಾದ ಕೋಟಾ ಶ್ರೀನಿವಾಸ್ ಪೂಜಾರಿ, ಪುತ್ತೂರು ಶಾಸಕ ಅಶೋಕ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಚಿವ ಎಸ್.ಅಂಗಾರ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ ಅಲ್ಲದೆ ಇತರೇ ಅತಿಥಿಗಳು ಭಾಗವಹಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ಡಾl ಯು.ಪಿ ಶಿವಾನಂದ, ಬಿ.ಕೆ ಮಾದವ ಗೌಡ, ನಿತ್ಯಾನಂದ ಮುಂಡೋಡಿ, ಪಿ.ಬಿ ಹರೀಶ್ ರೈ, ರವೀಂದ್ರ ಕುಮಾರ್ ರುದ್ರಪಾದ, ಶ್ರೀನಿವಾಸ ರೈ ಕಡಬ, ಪುಂಗವ ಗೌಡ, ಡಾll ಸಂಜಿತ್ ಎಸ್ ಅಂಚನ್, ಸರಪಾಡಿ ಅಶೋಕ್ ಶೆಟ್ಟಿ, ಲೊಕೇಶ್ ತಂತ್ರಿ, ಕಿರಣ್ ಅರಂಪಾಡಿ, ವಿವೇಕಾನಂದ ದೇವರಗದ್ದೆ, ಕರುಣಾಕರ ಪಿ, ದಿನೇಶ್ ಶಿರಾಡಿ, ಕುಮಾರಿ ಗೌರಿತ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.