ಅಡ್ಡಬೈಲು: ಬೈಕ್ ಗುದ್ದಿ ಶಾಲಾ ಬಾಲಕನಿಗೆ ಗಾಯ

0

ಪಂಜದ ಅಡ್ಡ ಬೈಲು ಸಮೀಪ ಶಾಲಾ ಬಾಲಕನಿಗೆ ಬೈಕ್ ಡಿಕ್ಕಿ ಹೊಡೆದು ಶಾಲಾ ಬಾಲಕನ ಕಾಲಿಗೆ ಗಾಯವಾದ ಘಟನೆ ಫೆ.2 ರಂದು ನಡೆದಿದೆ.

ಸುಬ್ರಹ್ಮಣ್ಯದ ಶಾಲೆಯೊಂದರ ಒಂದನೇ ತರಗತಿಯ ವಿದ್ಯಾರ್ಥಿ ಹಾರ್ದಿಕ್ ಎಂಬವರು ಶಾಲಾ ವಾಹನದಲ್ಲಿ ಬಂದು ಅಡ್ಡಬೈಲಿನಲ್ಲಿ ಇಳಿದು ರಸ್ತೆ ದಾಟುತ್ತಿದ್ದಾಗ ಬಳ್ಪ ಕಡೆಯಿಂದ ಬಂದ ಸದಾನಂದ ಎಂಬವರ ಬೈಕ್ ಡಿಕ್ಕಿ ಹೊಡೆದು ಶಾಲಾ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಬಾಲಕನ ಕಾಲಿಗೆ ಬಲವಾದ ಏಟು ಬಿದ್ದಿದ್ದು ಪುತ್ತೂರು ಪ್ರಗತಿ ಆಸ್ಪತ್ರೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.