ವೆಂಕಟ್ ವಳಲಂಬೆ ನೇಮಕ ವಿಚಾರ

0

ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ

ಪಕ್ಷದ ಚಟುವಟಿಕೆ ಸ್ಥಗಿತಗೊಳಿಸಲು ನಿರ್ಧಾರ

ವೆಂಕಟ್ ವಳಲಂಬೆಯವರನ್ನು ಬಿಜೆಪಿಯ ಸುಳ್ಯ ಮಂಡಲ ಅಧ್ಯಕ್ಷರನ್ನಾಗಿ ನೇಮಿಸಿದ ರೀತಿಯನ್ನು ವಿರೋಧಿಸಿರುವ ಸುಳ್ಯ ಮಂಡಲ ಬಿಜೆಪಿಯು ಈ ವ್ಯವಸ್ಥೆಯನ್ನು ಜಿಲ್ಲಾ ಸಮಿತಿಯವರು ಸರಿಪಡಿಸುವವರೆಗೆ ಪಕ್ಷದ ಚಟುವಟಿಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಸುಳ್ಯ ಮಂಡಲ ಸಮಿತಿಯು ವಿನಯಕುಮಾರ್ ಮುಳುಗಾಡು ಅವರ ಹೆಸರನ್ನು ಮಂಡಲ ಅಧ್ಯಕ್ಷತೆಗೆ ಸೂಚಿಸಿ ಜಿಲ್ಲಾ ಕಮಿಟಿಗೆ ಶಿಫಾರಸ್ಸು ಕಳುಹಿಸಿತ್ತು. ಈ ಶಿಫಾರಸ್ಸನ್ನು ಹೊರತುಪಡಿಸಿ ಬೇರೆಯವರನ್ನು ನೇಮಕ ಮಾಡುವಾಗ ಮಂಡಲ ಸಮಿತಿಯನ್ನು ಸಂಪರ್ಕಿಸದೆ ತಮ್ಮ ಇಚ್ಛೆಯಂತೆ ನೇಮಕ ಮಾಡಿರುವುದು ಸರಿಯಲ್ಲ. ಈ ರೀತಿ ಹೇರಿಕೆಯ ಕ್ರಮವನ್ನು ನಾವು ವಿರೋಧಿಸಬೇಕು ಎಂದು ಸಭೆಯಲ್ಲಿ ಸೇರಿದ್ದ 2೦೦ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ಜಿಲ್ಲಾ ಸಮಿತಿಯವರು ಈಗ ಆಗಿರುವ ಪ್ರಮಾದವನ್ನು ಸರಿಪಡಿಸುವವರೆಗೆ ಪಕ್ಷದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಯಿತು.ಸಭೆಯ ಬಳಿಕ ಬಿಜೆಪಿ ಕಚೇರಿಗೆ ಬೀಗ ಜಡಿಯಲಾಯಿತು.