ಅರಂತೋಡಿನಲ್ಲಿ ತಾಲೂಕು ಮಟ್ಟದ ಶೈಕ್ಷಣಿಕ‌ ಶಿಬಿರ

0

ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ : ಶಿಕ್ಷಣಾಧಿಕಾರಿ ರಮೇಶ್

ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ತನ್ನ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು ಎಂದು ಸುಳ್ಯ ಕ್ಷೇತ್ರ ಶಿಕ್ಷಾಣಾಧಿಕಾರಿ ರಮೇಶ್ ಬಿ.ಈ ಅವರು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಸುಳ್ಯ ದ.ಕ ಸಿ.ಸಿ.ಆ‌ರ್.ಟಿ. ಬಳಗ ಸುಳ್ಯ ಹಾಗೂ ದ.ಕ.ಜಿ.ಪ.ಹಿ.ಪ್ರಾ.ಶಾಲೆ, ಅರಂತೋಡು ಇವರ ಸಹಯೋಗದಲ್ಲಿ
ತಾಲೂಕು ಮಟ್ಟದ ಶೈಕ್ಷಣಿಕ ಶಿಬಿರ-2024 ನ್ನು
ದ.ಕ.ಜಿ.ಪ.ಹಿ.ಪ್ರಾ.ಶಾಲೆ, ಅರಂತೋಡು ಇಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಸಿ.ಸಿ.ಆರ್.ಟಿ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಿನ್ನಪ್ಪ ಗೌಡ ಪ್ರಾಸ್ತಾವಿಕ ಮಾತನಾಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದ್ದರು.


ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ಶುಭಹಾರೈಸಿದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಯು.ಕೆ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ ನಾಯ್ಕ , ಕರ್ನಾಟಕ ರಾಜ್ಯ ನೌಕರರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ತೀರ್ಥ ರಾಮ. ಹೆಚ್, ಕರ್ನಾಟಕ ಸಹ ಶಿಕ್ಷರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಿಕ್ಷಣ ಸಂಯೋಜಕಿ ಸಂದ್ಯಾಕುಮಾರಿ ಉಪಸ್ಥಿತರಿದ್ದರು.


ಶಾಲಾ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಬನ ಸ್ವಾಗತಿಸಿದರು. ಸಿ.ಸಿ.ಆರ್.ಟಿ ಸುಳ್ಯ ತಾಲೂಕು ಘಟಕದ ಕಾರ್ಯದರ್ಶಿ ಕೇಶವ ಸಿ.ಎ ವಂದಿಸಿದರು. ಶಿಕ್ಷಕಿ ಭಾನುಮತಿ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರಾದ ಪುರಂದರ ನಾರಾಯಣ್ ಭಟ್ ಮೋಹನ್‌ ಎಣ್ಣೂರು
ಗದಾಧರ, ಮಮತಾ,
ಚಿನ್ನಪ್ಪ ಗೌಡ ಎಂ, ಚೂಡಾಮಣಿ, ಕೇಶವ ಸಿ. ಎ, ಹರಿಪ್ರಸಾದ್,
ಗಿರಿಜಾ ಎಂ.ವಿ, ರಂಗನಾಥ್ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.