ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಮತ್ತು ಅಭಿವೃದ್ಧಿ ನಿರ್ವಹಣಾ ಸಮಿತಿ ವತಿಯಿಂದ ಪ್ರತಿಕಾ ಗೋಷ್ಠಿ
ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡ್ನೂರು ಇದರ ನೂತನವಾಗಿ ನಿರ್ಮಿಸಲಾದ ಶ್ರೀ ಅನ್ನಪೂರ್ಣೇಶ್ವರಿ ಭೋಜನಾಲಯ ಮತ್ತು ಡಿಜಿಟಲ್ ಗ್ರಂಥಾಲಯದ ಕೊಠಡಿ ಉದ್ಘಾಟನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಫೆಬ್ರವರಿ 14ರಂದು ಬೆಳಿಗ್ಗೆ 10.30 ಗಂಟೆಗೆ ಶಾಲಾ ಅಭಿವೃದ್ಧಿ ಮೇಲ್ಕುವಾರಿ ಸಮಿತಿ ಮತ್ತು ಅಭಿವೃದ್ಧಿ ನಿರ್ವಹಣಾ ಸಮಿತಿ ಸಹಯೋಗದಲ್ಲಿ ಊರಿನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಅಭಿವೃದ್ಧಿ ನಿರ್ವಹಣಾ ಸಂಚಾಲಕರಾದ ಜಿ ಜಗನ್ನಾಥ ಜಯನಗರ ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ 6.30 ಗಣಹೋಮ ಕಾರ್ಯಕ್ರಮ ನಡೆಯಲಿದ್ದು 9.30ಕ್ಕೆ ಅಥಿತಿಗಣ್ಯರನ್ನು ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು. ಧಾನಿಗಳ ಸಹಕಾರದಿಂದ ನಿರ್ಮಿಸಲ್ಪಟ್ಟ ಭೋಜನಾಲಯದ ಉದ್ಘಾಟನೆಯನ್ನು ಬೆಳಿಗ್ಗೆ 10.30 ಕ್ಕೆ ದ ಕ ಜಿಲ್ಲಾ ಜಿಲ್ಲಾಧಿಕಾರಿ ಮುಲೈ ಮುಹಿಲನ್ ನೇರವೇರಿಸಿಕೊಡಲಿದ್ದಾರೆ.
ತಾಲೂಕು ಪಂಚಾಯತ್ ಅನಿರ್ಬಂದಿತ ಅನುದಾನ 2023-24ರಡಿಯಲ್ಲಿ ನಿರ್ಮಿಸಿದ ಡಿಜಿಟಲ್ ಗ್ರಂಥಾಲಯವನ್ನು ಮಾಜಿ ಸಚಿವರಾದ ಶ್ರೀ ಎಸ್ ಅಂಗಾರ ರವರು ನೇರವೇರಿಸಿ ಕೊಡಲಿದ್ದು, ಸಭಾಧ್ಯಕ್ಷತೆಯನ್ನು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬೊಮ್ಮೊಟ್ಟಿ ವಹಿಸಲಿದ್ದಾರೆ.
ದೀಪ ಪ್ರಜ್ವಲನೆಯನ್ನು ಶ್ರೀಶ್ರೀಶ್ರೀ ರಾಜೇಶ್ ನಾಥ್ ಸ್ವಾಮೀಜಿ ಹಾಗೂ ಕೊಡಗು ಜಿಲ್ಲಾ ಅಧ್ಯಕ್ಷರು ಸಂತರ ಸಮಿತಿ (ರಿ) ಕೊಡಗು ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉದ್ಯಮಿಗಳು ಗ್ರೀನ್ ಹೀರೋ ಆಫ್ ಇಂಡಿಯಾ ಡಾl ಆರ್ ಕೆ ನಾಯರ್ ರವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಅಭ್ಯಾಗತಕರಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ, ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕರಾದ ಕು. ಭಾಗೀರಥಿ ಮುರುಳ್ಯ, ದ ಕ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾl ಆನಂದ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಇದರ ಉಪನಿರ್ದೇಶಕ ಡಿ ಆರ್ ದಯಾನಂದ, ಕೊಡಗು ಜಿಲ್ಲೆ ಜಿಲ್ಲಾ ಶಿಕ್ಷಣ ತರಬೇತಿ ಉಪನ್ಯಾಸಕ ಎಸ್ ಪಿ ಮಹದೇವ, ಪುತ್ತೂರು ಉಪ ವಿಭಾಗದ ಸಹಾಯಕ ಕಮಿಷನರ್ ಜುಬೀನ್ ಮಹಾ ಪಾತ್ರ, ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗಣ್ಯರುಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಅಂದು ಮಧ್ಯಾಹ್ನ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಶಾಲಾ ಶಿಕ್ಷಕರು ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಶ್ರೀಮತಿ ಶ್ರೀ ಪದ್ಮ ಲೋಕೇಶ್ ಮತ್ತು ಮನೆಯವರು ಬೆಂಗಳೂರು ಇವರಿಂದ ಅನ್ನ ಬಡಿಸುವ ಕೈಗಾಡಿ ಹಸ್ತಾಂತರ ಕಾರ್ಯಕ್ರಮ,ಬಳಿಕ ಮಧ್ಯಾಹ್ನ 2:30 ರಿಂದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀಮತಿ ಮೀನಾಕ್ಷಿ ಬೊಮ್ಮಟ್ಟಿ ಈ ಸಂದರ್ಭದಲ್ಲಿ ಮಾತನಾಡಿ ಊರಿನ ಗಣ್ಯರ ಮತ್ತು ಶಾಲಾ ವಿದ್ಯಾರ್ಥಿಗಳ ಪೋಷಕರ, ಎಸ್ ಡಿ ಎಮ್ ಸಿ ಸದಸ್ಯರ ಸಹಕಾರದಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಮತ್ತು ಭಾಗವಹಿಸುವಿಕೆ ಅತಿ ಅವಶ್ಯಕ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾಭಿವೃದ್ಧಿ ನಿರ್ವಹಣಾ ಸಮಿತಿ ಅಧ್ಯಕ್ಷ ಹೇಮಕುಮಾರ್ ಜೋಗಿಮೂಲೆ, ಉಪಾಧ್ಯಕ್ಷ ಶ್ರೀಮತಿ ಸಂಧ್ಯಾ ದೋಳ ಉಪಸ್ಥಿತರಿದ್ದರು.