ಫೆ 9-11 : ಪೇರಡ್ಕ ದರ್ಗಾ ಶರೀಪಿನ ಉರೂಸ್ ಪ್ರಾರಂಭ

0

ಜಾತಿ ಮತ ಭೇದವಿಲ್ಲದೆ ಸರ್ವರಿಂದಲೂ ಗೌರವಿಸಲ್ಪಡುವ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಪಿನ ಉರೂಸ್ ಕಾರ್ಯಕ್ರಮವು ಫೆ.8 ಶುಕ್ರವಾರದಂದು ಜುಮಾ ನಮಾಜಿನ ಬಳಿಕ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಮಸೀದಿ ಮತ್ತು ದರ್ಗಾದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.ನಂತರ ತೆಕ್ಕಿಲ್ ಕುಟುಂಬಸ್ಥರ ಪರವಾಗಿ ಪ್ರಾರಂಬದಿಂದಲೂ ನೀಡುತ್ತಿರುವ ಸಿಹಿ ಊಟದೊಂದಿಗೆ ಮತ್ತು” ತೆಕ್ಕಿಲ್ ಮೊಹಮದ್ ಹಾಜಿ “ವೇದಿಕೆಯಲ್ಲಿ ಸಂಜೆ ನಡೆೆಯುವ ಧಾರ್ಮಿಕ ಸಮಾರಂಭವನ್ನು ಬಹು ಸಯ್ಯದ್ ಝೈನುಲ್ ಆಬಿದೀನ್ ಜಿಪ್ರಿತಂಗಳ್ ಬೆಳ್ತಂಗಡಿರವರು ಉಧ್ಘಾಟಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಅಲ್ ಹಾಜ್ ಸಿರಾಜುದ್ಧೀನ್ ದಾರಿಮಿ ಕಕ್ಕಾಡ್ ಕೇರಳ ಇವರು ನೀಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ. ದುವಾವನ್ನು ಸ್ಥಳೀಯ ಖತೀಬರಾದ ಬಹು| ರಿಯಾಝ್ ಫೈಝಿಯವರು ನೆರೆವೇರಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಬಹು| ಅಬ್ದುಲ್ ಖಾದರ್ ಫೈಝಿ ಅಧ್ಯಕ್ಷರು ಜಮೀಯ್ಯತ್ತುಲ್ ಮುಅಲ್ಲಿಮ್ ಸುಳ್ಯ ರೇಂಜ್, ಕಲ್ಲುಗುಂಡಿ ಜುಮಾ ಮಸೀದಿ ಖತೀಬರಾದ ನಈಮ್ ಫೈಝಿ, ಎಂ.ಜಿ.ಎಂ ಮಾಜಿ ಅಧ್ಯಕ್ಷ ಹಾಜಿ ಟಿ.ಎಂ ಬಾಬಾ ತೆಕ್ಕಿಲ್, ಸುಳ್ಯ ಮದರಸ ಮ್ಯಾನೇಜ್ ಮೆಂಟ್‌ನ ಮಾಜಿ ಅಧ್ಯಕ್ಷ ತಾಜ್ ಮೊಹಮ್ಮದ್ ಸಂಪಾಜೆ, ಸುನ್ನಿ ಮಹಲ್ ಪೇಡರೇಶನ್ ಅಧ್ಯಕ್ಷ ಹಮೀದ್ ಹಾಜಿ, ವಿವಿಧ ಮಸೀದಿಗಳ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಸೆಂಟ್ಯಾರ್ ಕಲ್ಲುಗುಂಡಿ, ಹಾಜಿ ಇಬ್ರಾಹಿಂ ಸಿಫುಡ್ ಮೊಗರ್ಪಣೆ ಸುಳ್ಯ, ಹಾಜಿ ಅಶ್ರಪ್ ಗುಂಡಿ ಅರಂತೋಡು, ಮಹಮ್ಮದ್ ಹಮೀದಿಯ ಸಂಪಾಜೆ, ಶರೀಫ್ ನಿಡುಬೆ ಐವರ್ನಾಡು, ಹಾಜಿ ಭಾಷ ಸಾಹೇಬ್ ಅರಂಬೂರು, ಹಾಜಿ ಅಬ್ದುಲ್ ರಝಾಕ್ ಕೊಯನಾಡು, ನಝೀರ್ ಶಾಲೆಕ್ಕಾರ್ ಮಂಡೆಕೋಲು, ಶರೀಪ್ ಅಧ್ಯಕ್ಷರು ಪೈಚಾರ್, ಹಾಗೂ ಜಾಲ್ಸೂರು ಗ್ರಾ. ಪಂ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ನಡುವಡ್ಕ, ಗ್ರಾ.ಪಂ ಸದಸ್ಯ ಮುಜೀಬ್ ಪೈಚಾರು, ಡಾ| ಆರ್.ಬಿ ಬಶೀರ್ ಪೈಚಾರ್, ಎಂ.ಜಿ.ಎಮ್ ಪೇರಡ್ಕ ಇದರ ಗೌರವಾಧ್ಯಕ್ಷ ಟಿ.ಇ ಆರೀಫ್ ತೆಕ್ಕಿಲ್, ಮಾನವ ಸಂಪನ್ಮೂಲ ಬೆಂಗಳೂರು ಇದರ ಹಿರಿಯ ವ್ಯವಸ್ಥಾಪಕ ಹಾರೀಸ್ ಪೇರಡ್ಕ, ಎ.ಕೆ. ಹಸೈನಾರ್ ಕಲ್ಲುಗುಂಡಿ, ಕೆ.ಎಂ ಅಶ್ರಫ್ ಕಲ್ಲುಗುಂಡಿ, ಅಬ್ದುಲ್ ಮಜೀದ್ ಅರಂತೋಡು ಮೊದಲಾದವರು ಭಾಗವಹಿಸಲಿದ್ದಾರೆ.