ಸಂಬಂಧಿಕರ ಮನೆಗೆ ಬಂದ ಬಾಲಕ ನಾಪತ್ತೆ: ಪೋಷಕರಿಂದ ದೂರು

0

ಮಾಡನ್ನೂರು ಕಾವು ಹಮೀದ್ ನೆಕ್ಕರೆ ಅವರ ಮಗ ಶಾಹಿದ್ (೧೬) ಎಂಬವನು ಕೆಲವು ದಿನಗಳಿಂದ ಕಾಣೆಯಾಗಿದ್ದಾನೆ.
ಮಾಡನ್ನೂರು ನೂರುಲ್ ಹುದಾ: ಅರೇಬಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ಈ ಬಾಲಕ ಸುಳ್ಯ ಆರಂಬೂರು ಮಾಂಬ್ಲಿ ಬಳಿ ಇರುವ ತನ್ನ ಸಂಬಂಧಿಕರ ಮನೆಗೆ ಒಂದು ವಾರದ ಹಿಂದೆ ಬಂದಿದ್ದ ಎನ್ನಲಾಗಿದೆ.


ಮರುದಿನ ಶಾಹಿದ್ ತನ್ನ ಮನೆಗೆ ಹೊಗುತ್ತೆನೆ ಎಂದು ಹೊರಟವ ನಾಪತ್ತೆಯಾಗಿದ್ದ.
ಈ ವಿಷಯದ ಕುರಿತು ಕಾಣೆಯಾಗಿರುವ ಶಾಹಿದ್ ನ ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾರ್ವಜನಿಕರು ಎಲ್ಲಿಯಾದರೂ ಈ ಬಾಲಕನ ಬಗ್ಗೆ ಮಾಹಿತಿ ಲಭಿಸಿದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.