ಇಂದು ರಾತ್ರಿ ಪೇರಡ್ಕ ಮುಹಿಯ್ಯದ್ಧೀನ್ ಜುಮ್ಮಾ ಮಸೀದಿ ಉರೂಸ್ ಸಮಾರಂಭಕ್ಕೆ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಭೇಟಿ

0

ಸಂಪಾಜೆ ಗ್ರಾಮದ ಪೇರಡ್ಕ ಮುಹಿಯ್ಯದ್ಧೀನ್ ಜುಮ್ಮಾ ಮಸೀದಿ , ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ನಡೆಯುತ್ತಿರುವ ಉರೂಸ್ ಸಮಾರಂಭ ಹಾಗೂ ಸರ್ವಧರ್ಮ ಸಮ್ಮೇಳನಕ್ಕೆ ಇಂದು ರಾತ್ರಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿ 8.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.