ಕೊಲ್ಲಮೊಗ್ರು ಪತ್ರಕರ್ತರ ಗ್ರಾಮ ವಾಸ್ತವ್ಯ 233 ಅರ್ಜಿಗಳು

0

ಕೊಲ್ಲಮೊಗ್ರದಲ್ಲಿ ಫೆ.10 ರಂದು ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ 233 ಕ್ಕೂ ಅಧಿಕ ಮನವಿ ಪತ್ರಗಳು ಬಂದಿದ್ದು ಬಹುತೇಕ ಮನವಿಗಳು ಮನೆಯ ಅಡಿಸ್ಥಳ ಹಕ್ಕು ಪತ್ರಕ್ಕಾಗಿ ಇದ್ದವು. ಇದಲ್ಲದೆ ಮನೆ ನಿವೇಶನ, ವಿದ್ಯುತ್ ಸಂಪರ್ಕ, ಆಟದ ಮೈದಾನಕ್ಕೆ, ವಿದ್ಯಾರ್ಥಿ ನಿಲಯಕ್ಕೆ, ಪ್ರವಾಹದಿಂದ ತೊಂದರೆ ಆದದಕ್ಕೆ ಪರಿಹಾರಕ್ಕೆ, ಆರೋಗ್ಯ ಉಪ ಕೇಂದ್ರಕ್ಕೆ ಸ್ವಂತ ಕಟ್ಟಡಕ್ಕೆ, ಬದಲಿ ಸೇತುವೆಗೆ, ಕುಡಿಯುವ ನೀರಿಗೆ, ವಿಕಲಚೇತನರಿಗೆ ಮನೆ ಕಲ್ಪಿಸಲು, ಅಪಾಯಕಾರಿ ಮರ ತೆರವಿಗೆ, ಕಾಯಂ ಶಿಕ್ಷಕರಿಗಾ,ಗಿ ಬಸ್ಸಿನ ವ್ಯವಸ್ಥೆಗಾಗಿ, ಸುಳ್ಯ ವಿಧಾನ ಸಭಾ ಕ್ಷೇತ್ರದ ಮೀಸಲಾತಿ ತೆರವುಗೊಳಿಸುವುದಕ್ಕಾಗಿ, ವಿದ್ಯುತ್ ಲೈನ್ ಬದಲಾವಣೆಗಾಗಿ, ಕೋವಿ ಪರವಾನಿಗಾಗಿ, ಶಾಶ್ವತ ಕಂದಾಯ ಭೂಮಿಗಾಗಿ, ಮಾದರಿ ಪಬ್ಲಿಕ್ ಶಾಲೆ ತೆರೆಯಲು, ಹಾಲು ಡಿಪೋಗೆ ನಿವೇಶನ ಕೋರಿ, ಕೋರಿ ಅಡುಗೆ ಕೊಟಡಿಗಾಗಿ, ಶಾಲೆಗೆ ಕಂಪ್ಯೂಟರ್ ಪ್ರಯೋಗಾಲಯಕ್ಕೆ, ಪೀಠೋಪಕರಣಕ್ಕಾಗಿ, ಆವರಣ ಗೋಡೆಗಾಗಿ, ರಸ್ತೆ ಅಗಲೀಕರಣಕ್ಕೆ, ಮಧ್ಯದ ಅಂಗಡಿ ತೆರವಿಗೆ, ನೆಟ್ವರ್ಕ್ ಸಮಸ್ಯೆಗಾಗಿ, ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು, ಆಶಾ ಕಾರ್ಯಕರ್ತೆಯರ ಸಂಬಳ ಏರಿಕೆಗಾಗಿ, ಪಿಂಚಣಿಗಾಗಿ, ಅಡಿಕೆಯನ್ನು ನೀರಿನಿಂದ ಒದ್ದೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು, ಹರಿಹರದಲ್ಲಿ ಜನೌಷದ ಕೇಂದ್ರಕ್ಕಾಗಿ, ತಡೆಗೋಡೆ ರಚಿಸಲು, ಹೊಸ ಸೇತುವೆ ನಿರ್ಮಿಸಲು, ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗದಿರುವ ಬಗ್ಗೆ, ಮನೆಗೆ ಡೋರ್ ನಂಬರ್ ಸಿಗದಿರುವ ಬಗ್ಗೆ, ದಾರಿದೀಪಕ್ಕಾಗಿ, ಗ್ರಾಮ ಅರಣ್ಯ ಸಮಿತಿಯ ರಚನೆಗಾಗಿ, ರಾಷ್ಟ್ರೀಕೃತ ಬ್ಯಾಂಕಿಗಾಗಿ, ಸಿಸಿಟಿವಿ ಅಳವಡಿಕೆಗಾಗಿ, ಪ್ರಭಾರ ಮುಖ್ಯ ಶಿಕ್ಷಕಿಯನ್ನು ವರ್ಗಾಯಿಸಲು ಕೋರಿ ಹೀಗೆ ಹತ್ತು ಹಲವು ಮನವಿಗಳು ಬಂದಿರುವುದಾಗಿ ತಿಳಿದು ಬಂದಿದೆ.