ಅಡ್ಪಂಗಾಯ ಶಾಲಾ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಲು ಉಸ್ತುವಾರಿ ಸಚಿವರಿಗೆ ಮನವಿ

0

ಸುಳ್ಯ ಅಜ್ಜಾವರ ಗ್ರಾಮದ ಅಡ್ಪoಗಾಯ ಶಾಲೆಯಲ್ಲಿ 2022-23 ನೇ ಸಾಲಿನ ಅನುದಾಡಿಯಲ್ಲಿ ನಿರ್ಮಿಸಲಾದ ತರಗತಿ ಕೊಠಡಿ ಉದ್ಘಾಟನೆಗೆ ಆಗಮಿಸುವಂತೆ ಜಿಲ್ಹಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ.

ಫೆ.9ರಂದು ಮಂಗಳೂರಿನಲ್ಲಿ ಉಸ್ತುವಾರಿ ಸಚಿವರನ್ನು ಭೇಟಿಯಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ್, ಬ್ಲಾಕ್ ಕಾಂಗ್ರೆಸ್ ಪ್ರ ಕಾರ್ಯದರ್ಶಿ ಪಿ.ಎಸ್‌ ಗಂಗಾಧರ ಹಾಗೂ ಅಡ್ಪoಗಾಯ ಶಾಲಾ ಎಸ್ ಡಿ ಎಂ ಸಿ ಸದ್ಯಸರಾದ ಎ.ಬಿ ಅಬ್ಬಾಸ್ ಮನವಿ ಮಾಡಿದರೆಂದು ತಿಳಿದುಬಂದಿದೆ.

ಅಧಿವೇಶನ ಮುಗಿದ ಬಳಿಕ ಶಾಲಾ ಉದ್ಘಾಟನೆಗೆ ಬರುವುದಾಗಿ ಸಚಿವರು ಭರವಸೆ ನೀಡಿದ್ದಾರೆಂದು ಅಬ್ಬಾಸ್ ರವರು ಸುದ್ದಿಗೆ ತಿಳಿಸಿದ್ದಾರೆ.