ಸಂಪಾಜೆ: ಕಡೆಪಾಲದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಬೈಲುಕೋಲ

0

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಕಡೆಪಾಲದ ನಿವೃತ್ತ ಎ. ಎಸ್. ಐ ಕೆ. ಪಿ. ಗೋಪಾಲ ಅವರ ಮನೆಯಲ್ಲಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಬೈಲು ಕೋಲೋತ್ಸವವು ಫೆ.11ರಂದು ನಡೆಯಿತು.

ಫೆ.10ರಂದು  ಸಂಜೆ   ಕಲ್ಲುಗುಂಡಿಯ  ಶ್ರೀಮಹಾವಿಷ್ಣು ಮೂರ್ತಿ ದೈವಸ್ಥಾನದಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರವನ್ನು  ಕಡೆಪಾಲಕ್ಕೆ  ತರಲಾಯಿತು. 

ಈ ಸಂದರ್ಭದಲ್ಲಿ ಮಹಾವಿಷ್ಣು ಮೂರ್ತಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ , ಕಾರ್ಯದರ್ಶಿ ಮಂಜುನಾಥ್ ಕೆ., ಖಜಾಂಜಿ ಪದ್ಮಯ್ಯ ,ಮೊಕ್ತೇಸರ ಕರುಣಾಕರ ಸರ್ವೇಗಾರ, ಗೌರವ ಸಲಹೆಗಾರ ಶ್ರೀಧರ, ದೈವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಮಣಿಯಾಣಿ, ಸರ್ವ ಸದಸ್ಯರು , ಮತ್ತು ಮನೆಯವರು , ಕುಟುಂಬದವರು, ಊರಿನವರು ಉಪಸ್ಥಿತರಿದ್ದರು.
ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆದು, ಫೆ.11ರಂದು ಬೆಳಿಗ್ಗೆ ದೈವದ ಬೈಲು ಕೋಲ, ಅರಶಿನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.