ಸಂಬಂಧಿಕರ ಮನೆಗೆ ಬಂದು ಕಾಣೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆ

0

ಸುಳ್ಯದ ಅರಂಬೂರು ಸಂಬಂಧಿಕರ ಮನೆಗೆ ಬಂದು ಹಿಂದಿರುಗದೆ ಕಳೆದ ಹತ್ತು ದಿನಗಳ ಹಿಂದೆ ಕಾಣೆಯಾಗಿದ್ದ ಮಾಡನ್ನೂರಿನ ಹಮೀದ್ ನೆಕ್ಕರೆ ಅವರ ಮಗ ಶಾಹಿದ್ ಎಂಬವನು ಇಂದು ಬೆಂಗಳೂರಿನಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದು ಸುಳ್ಯ ಪೊಲೀಸರು ಬಾಲಕನ ಹುಡುಕಾಟಕ್ಕಾಗಿ ಕಾರ್ಯಚರಣೆ ನಡೆಸುತ್ತಿದ್ದರು.

ಬಾಲಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ಆತನ ಕುಟುಂಬದ ಮೂಲದವರು ಆತ ಸಿಕ್ಕಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.