ತಾಲೂಕು ಮಟ್ಟದ ಹಸ್ತ ಪತ್ರಿಕೆ ಸ್ಪರ್ಧೆಯ ಬಹುಮಾನ ವಿತರಣೆ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸುಳ್ಯ ತಾಲೂಕಿನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಹಸ್ತ ಪತ್ರಿಕೆ ಸ್ಪರ್ಧೆ ನಡೆಸಲಾಯಿತು.


ಸುಳ್ಯದ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ‌.ಇ. “ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಮೇಲೆ ಒಲವು ಮೂಡಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ‌ಸ್ಪಷ್ಟ ಓದು ಹಾಗೂ ಬರವಣಿಗೆ ತಿಳಿಯದ ವಿದ್ಯಾರ್ಥಿ ಶಿಕ್ಷಣದಲ್ಲಿ ಹಿಂದುಳಿಯುತ್ತಾನೆ.ಶಾಲಾ ಅವಧಿಯಲ್ಲಿ ನಿರ್ದಿಷ್ಟ ಅವಧಿಯನ್ನು ವಿದ್ಯಾರ್ಥಿಗಳ ಬರವಣಿಗೆಯ ಸುಧಾರಣೆಗೆ ಮೀಸಲಿಡಬೇಕು” ಎಂದು ಹೇಳಿದರು .


ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಮಾತನಾಡಿ “ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ -ಬರಹದ ಸುಧಾರಣೆಗೆ ಸಾಹಿತ್ಯ ಪರಿಷತ್ತಿನ ಕಾರ್ಯಗಳಿಗೆ ಶಿಕ್ಷಣ ಇಲಾಖೆ ಸಹಕರಿಸುತ್ತದೆ” ಎಂದರು.


ಸಭಾಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಮಾತನಾಡಿ “ವಿದ್ಯಾರ್ಥಿಗಳಲ್ಲಿ ಸೃಜನಶೀಲ ವ್ಯಕ್ತಿತ್ವ ವನ್ನು ರೂಪಿಸುವುದು ಸಾಹಿತ್ಯ ಪರಿಷತ್ತಿನ ಮುಖ್ಯ ಉದ್ದೇಶ.ಹಸ್ತ ಪತ್ರಿಕೆ ಸ್ಪರ್ಧೆ ಕನ್ನಡ ಸಾಹಿತ್ಯದ ಕುರಿತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರಿಗೆ -ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ” ಎಂದರು .
ವೇದಿಕೆಯಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಶ್ರೀಮತಿ ಚಂದ್ರಮತಿ, ಕೋಶಾಧಿಕಾರಿ ದಯಾನಂದ ಆಳ್ವ,ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಉಪಸ್ಥಿತರಿದ್ದರು.


ತೇಜಸ್ವಿ ಕಡಪಳ. ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಸಂಕೀರ್ಣ .ಎ‌.ಎಲ್ ಧನ್ಯವಾದಗೈದರು. ಚಂದ್ರಮತಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು..
ಮಮತಾ ರವೀಶ್ ಕಾರ್ಯಕ್ರಮ ನಿರೂಪಿಸಿದರು.


ಹಸ್ತಪತ್ರಿಕೆ ಸ್ಪರ್ಧೆಯಲ್ಲಿ 31 ಪ್ರಾಥಮಿಕ ಹಾಗೂ 9 ಪ್ರೌಢಶಾಲೆಗಳು ಭಾಗವಹಿಸಿದ್ದವು.


ವಿಜೇತರ ಪಟ್ಟಿ;
ಪ್ರಾಥಮಿಕ ವಿಭಾಗ
ಪ್ರಥಮ : ಸ ಉ. ಹಿ.ಪ್ರಾ ಶಾಲೆ ಶಾಂತಿನಗರ, ಸ.ಕಿ.ಪ್ರಾ ಶಾಲೆ. ಪೈಂಬೆಚಾಲು,ದ್ವಿತೀಯ;ಸ.ಹಿ.ಪ್ರಾ ಶಾಲೆ ಕೋಲ್ಚಾರು,ತೃತೀಯ; ಸ.ಕಿ.ಪ್ರಾ ಶಾಲೆ ಪುತ್ಯ.
ಪ್ರೌಢ ಶಾಲಾ ವಿಭಾಗ;
ಪ್ರಥಮ- ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ (ಪ್ರೌಢಶಾಲಾ ವಿಭಾಗ) , ದ್ವಿತೀಯ;ಸರಕಾರಿ ಪ್ರೌಢಶಾಲೆ ಮರ್ಕಂಜ,ತೃತೀಯ; ಸರಕಾರಿ ಪ ಪೂ ಕಾಲೆಜು ಐವರ್ನಾಡು (ಪ್ರೌಢಶಾಲಾ ವಿಭಾಗ).