ರಾಜಕೀಯವಾಗಿ ಸಮುದಾಯದ ಅರ್ಹ ವ್ಯಕ್ತಿಗಳನ್ನು ಕಡೆಗಣಿಸದಿರಿ
ನಮಗಾದ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ
ದ.ಕ.ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘ ಎಚ್ಚರಿಕೆ
ಶೈಕ್ಷಣಿಕ, ವೈದ್ಯಕೀಯ, ರಾಜಕೀಯ, ಆರ್ಥಿಕತೆ ಮತ್ತು ಸಾಮಾಜಿಕವಾಗಿ ನಮ್ಮ ಸಮುದಾಯದವರನ್ನು ಸದೃಢಗೊಳಿಸಿ ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವುದು ನಮ್ಮ ಸಂಘದ ಧ್ಯೇಯೋzಶ.ಆದರೆ ಇತ್ತೀಚಿಗಿನ ದಿನಗಳಲ್ಲಿ ನಮ್ಮ ಸಮುದಾಯವನ್ನು ಕೀಳಾಗಿ ಕಾಣುವುದು,ಅವಕಾಶಗಳಿಂದ ವಂಚಿಸುವುದು ಮುಂತಾದ ಬೆಳವಣಿಗೆಗಳನ್ನು ಗಮನಿಸಿzವೆ. ಅದರಲ್ಲೂ ರಾಜಕೀಯವಾಗಿ ನಮ್ಮ ಸಮುದಾಯದ ಅರ್ಹ ವ್ಯಕ್ತಿಗಳನ್ನು ಕಡೆಗಣಿಸುವುದು ಕಂಡು ಬಂದಿದೆ.ಮುಂಬರುವ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಿ ನಮಗಾದ ಅನ್ಯಾಯವನ್ನು ಸರಿಪಡಿಸಬೇಕಾಗಿ ಎಲ್ಲಾ ರಾಜಕೀಯ ಪಕ್ಷದವರಲ್ಲೂ ಕೇಳಿಕೊಳ್ಳುತ್ತಿದ್ದೇವೆ.ಇಲ್ಲವಾದರೆ ಸೂಕ್ತ ನಿರ್ಧಾರ ತೆಗೆದು ಕೊಳ್ಳಲಿzವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಎಚ್ಚರಿಕೆ ನೀಡಿದೆ.
ಮಂಗಳೂರು ಓಷಿಯನ್
ಪರ್ಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ.ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಡಿ.ಬಿ.ಬಾಲಕೃಷ್ಣ ಗೌಡ ಅವರು,ಕರ್ನಾಟಕ ರಾಜ್ಯಾದ್ಯಂತ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅತೀ ದೊಡ್ಡ ಪ್ರಬಲ ಸಮುದಾಯವೆಂದರೆ ಅದು ಒಕ್ಕಲಿಗ ಸಮುದಾಯ.ಸತ್ಯ, ಧರ್ಮ, ನಿಷ್ಠೆಯಲ್ಲಿ ನಡೆಯುವ ಒಕ್ಕಲಿಗ ಸಮುದಾಯ ರಾಜಪರಂಪರೆಯ ಹಿನ್ನೆಲೆಯ ಸಮುದಾಯವಾಗಿದ್ದು ಕೇವಲ ಕೃಷಿಕರಾಗಿ ಮಾತ್ರ ಗುರುತಿಸಿಕೊಂಡಿಲ್ಲ ಶೈಕ್ಷಣಿಕ, ವೈದ್ಯಕೀಯ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿಯೂ ಇತರೆ ಸಮುದಾಯಕ್ಕೆ ಸಮಾನವಾಗಿ ಬಹಳಷ್ಟು ಕೊಡುಗೆ ನೀಡಿದೆ.ಅದಲ್ಲದೆ ಒಕ್ಕಲಿಗ ಸಮುದಾಯ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಸಮುದಾಯವಾಗಿದ್ದು ಕೆದಂಬಾಡಿ ರಾಮಯ್ಯ ಗೌಡರನ್ನು, ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬೆಂಗಳೂರು ನಿರ್ಮಾತೃ ನಾಡ ಪ್ರಭು ಕೆಂಪೇಗೌಡರನ್ನು, ದೇಶಕ್ಕೆ ಪ್ರಧಾನಿ, ರಾಜ್ಯದ ಮೊದಲನೇ ಮುಖ್ಯಮಂತ್ರಿ ಹಾಗೂ ಎರಡನೇ ಮುಖ್ಯಮಂತ್ರಿ ಹಾಗೂ ಈವರೆಗೆ ಏಳು ಮುಖ್ಯಮಂತ್ರಿಗಳನ್ನು ಕೊಟ್ಟ ಸಮುದಾಯ ಹಾಗೆಯೇ ಕರ್ನಾಟಕ ವಿಧಾನ ಸೌಧ ಕಟ್ಟಿಸಿದವರು ಮತ್ತು ಮೊದಲ ರಾಷ್ಟ್ರ ಕವಿಯನ್ನು ನೀಡಿದ ಸಮುದಾಯ ಅಂದರೆ ಅದು ಒಕ್ಕಲಿಗ ಸಮುದಾಯ,ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಪ್ರಭಾವ ಇರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಈ ಸಮುದಾಯ ಹೊಂದಿದೆ.ಜೊತೆಗೆ ಇತರ ಸಮುದಾಯವರೊಂದಿಗೆ ಅನ್ನೋನ್ಯತೆಯಿಂದ ನಡೆದುಕೊಂಡು ಎಲ್ಲ ಸಮುದಾಯವನ್ನು ಅಪ್ಪಿಕೊಂಡು ಒಪ್ಪಿಕೊಂಡು ಬರುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಸಮುದಾಯ ರಾಜಕೀಯವಾಗಿ ತುಳಿತಕ್ಕೆ ಒಳಗಾಗುತ್ತಿರುವುದು ಕಂಡು ಬರುತ್ತದೆ.೬.೫೦ ಲಕ್ಷಕ್ಕೂ ಅಧಿಕ ಒಕ್ಕಲಿಗರು ವಾಸಿಸುವ ಈ ಜಿಲ್ಲೆಯಲ್ಲಿ ೩.೮೦ ಲಕ್ಷಕ್ಕೂ ಅಧಿಕ ಪ್ರಬುದ್ಧ ಮತದಾರರಿದ್ದಾರೆ.ಜಿಲ್ಲೆಯಲ್ಲಿ ಅತೀ ದೊಡ್ಡ ಸಮುದಾಯವಾದರೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ಉನ್ನತ ಹುದ್ದೆಗಳನ್ನು ನೀಡದೆ ನಮ್ಮ ಸಮುದಾಯದವರು ವಂಚಿತರಾಗಿರುವುದನ್ನು ನಾವು ಕಾಣುತ್ತಿzವೆ.ದೇಶದಲ್ಲಿ ಬಹುಸಂಖ್ಯಾತರಿಗೆ ಬೆಲೆಯಿಲ್ಲ ಎಂದು ಎಲ್ಲರೂ ಬೊಬ್ಬೆ ಹೊಡೆಯತ್ತಿದ್ದಾರೆ.ಅದೇ ರೀತಿಯಾಗಿ ಜಿಲ್ಲೆಯಲ್ಲಿ ಕೂಡಾ ಬಹುಸಂಖ್ಯಾತರಿಗೆ ಪ್ರಾತಿನಿಧ್ಯ ಇಲ್ಲದಿರುವುದು ತುಂಬಾ ನೋವನ್ನುಂಟು ಮಾಡಿದೆ.ಜಿಲ್ಲೆಯಿಂದ ಒಕ್ಕಲಿಗ ಗೌಡರ ಸಮಾಜದ ಸದಸ್ಯರು ವಿಧಾನಸಭೆ, ವಿಧಾನಪರಿಷತ್, ಸ್ಥಳೀಯಾಡಳಿತದಲ್ಲೂ ನಮ್ಮ ಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವಿಲ್ಲ.ಎಲ್ಲ ಕಡೆಯೂ ನಮ್ಮನ್ನು ಒಂದು ರೀತಿಯಲ್ಲಿ ಅವಕಾಶವಂಚಿತರನ್ನಾಗಿ ಮಾಡಿ ನಮ್ಮ ಸ್ಥಾನವನ್ನು ಬೇರೆ ಸಮುದಾಯದವರು ಆಕ್ರಮಿಸುತ್ತಿದ್ದಾರೆ.ನಮ್ಮ ಸಮುದಾಯವನ್ನು ಸಮಗ್ರವಾಗಿ ಒಗ್ಗಟ್ಟು ಮಾಡುವ ದೃಷ್ಟಿಯಿಂದ ಮತ್ತು ನಮ್ಮ ಸಮುದಾಯದ ಭಾವನೆಗಳಿಗೆ ಆರೋಗ್ಯಕರ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ಈ ಸಂಘ ಹುಟ್ಟು ಹಾಕಿzವೆ.ಪುತ್ತೂರಿನಲ್ಲಿ ಸುಮಾರು ೧.೩೦ ಲಕ್ಷ, ಸುಳ್ಯದಲ್ಲಿ ಸುಮಾರು ೧.೮೦ ಲಕ್ಷ, ಬೆಳ್ತಂಗಡಿಯಲ್ಲಿ ಸರಿ ಸುಮಾರು ೧.೨೦ ಲಕ್ಷ ನಮ್ಮ ಸಮುದಾಯದ ಸಂಖ್ಯೆ ಜಾಸ್ತಿ ಇದೆ.ಮಂಗಳೂರಿನಲ್ಲಿ ಮತ್ತು ಬಂಟ್ವಾಳದಲ್ಲಿ ನಮ್ಮ ಸಂಖ್ಯೆ ಕಡಿಮೆ ಇದ್ದಾರೆ. ಹೀಗೆ ಜಿಲ್ಲೆಯಲ್ಲಿ ನಾವು ಬಹುಸಂಖ್ಯಾತರಾದುದರಿಂದ ನಮ್ಮ ಸಮುದಾಯಕ್ಕೆ ಹೆಚ್ಚಿನ ಆದ್ಯತೆಯನ್ನು ರಾಜಕೀಯ ಪಕ್ಷಗಳು ನೀಡುವುದರೊಂದಿಗೆ ಸಾಮಾಜಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು ಒತ್ತಾಯಿಸುತ್ತಿzವೆ. ಮುಂಬರುವ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಅರ್ಹ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಿ ನಮಗಾದ ಅನ್ಯಾಯವನ್ನು ಸರಿಪಡಿಸಬೇಕಾಗಿ ಎಲ್ಲಾ ರಾಜಕೀಯ ಪಕ್ಷದವರಲ್ಲೂ ಕೇಳಿಕೊಳ್ಳುತ್ತಿzವೆ.ಇದು ಸಾಧ್ಯವಾಗದೇ ಹೋದರೆ ಮುಂದಿನ ದಿನಗಳಲ್ಲಿ ನಾವುಗಳು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗೆಲ್ಲುವ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕೊಡಬೇಕು: ಪುತ್ತೂರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಅದ್ಯತೆ ನೀಡಿದ್ದರು.ಅವರನ್ನು ಗೆಲ್ಲಿಸಬಹುದಿತ್ತು.ಆದರೆ ಪ್ರಾತಿನಿಧ್ಯ ಕೊಡುವಾಗ ಒಟ್ಟಾರೆಯಾಗಿ ಕೊಟ್ಟಿದ್ದಾರೆ. ಮಾಜಿ ಶಾಸಕರಿಗೆ ಕೊಡಬೇಕಾಗಿತ್ತು.ನಾವು ಕೇಳಿದ್ದು ಮಾಜಿ ಶಾಸಕರಿಗೆ ಎಂದು ಪತ್ರಕರ್ತರ ಪ್ರಶ್ನೆಗೆ ಬಾಲಕೃಷ್ಣ ಡಿ.ಬಿ ಉತ್ತರಿಸಿದರು.ಧ್ವನಿಗೂಡಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಡಾ| ಎನ್.ಎ.ಜ್ಞಾನೇಶ್ ಅವರು, ಚುನಾವಣೆಯಲ್ಲಿ ಆಶಾ ತಿಮ್ಮಪ್ಪ ಅವರು ಸೋಲಲು ಬೇರೆ ಬೇರೆ ಕಾರಣವಿತ್ತು.ಅದನ್ನು ವಿಶ್ಲೇಷಣೆ ಮಾಡಲು ಇದು ಸೂಕ್ತ ವೇದಿಕೆಯಲ್ಲ.ನಾವು ಹೇಳುವುದು ಇಷ್ಟೆ.ಮುಂದಿನ ದಿನ ನಮ್ಮ ಸಮುದಾಯದವರಿಗೆ ಎಲ್ಲಿ ಗೆಲ್ಲುತ್ತಾರೋ ಅಲ್ಲಿ ಪ್ರಾತಿನಿಧ್ಯ ಕೊಡಬೇಕು.ಸೋಲುವಲ್ಲಿ ಪ್ರಾತಿನಿಧ್ಯ ಕೊಡುವುದು ಸರಿಯಲ್ಲ.ಎಲ್ಲಿ ಕೂಡಾ ಕೊಡಲಿಲ್ಲ ಎಂದು ನಾವು ಹೇಳುವುದಿಲ್ಲ.ಆದರೆ ಇತ್ತೀಚಿಗಿನ ದಿನಗಳಲ್ಲಿ ಪ್ರಾತಿನಿಧ್ಯ ಕೊಡುತ್ತಿಲ್ಲ.ನಾವು ರಾಜ್ಯದ ಕುರಿತು ಮಾತನಾಡುತ್ತಿಲ್ಲ. ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಕುರಿತು ಮಾತನಾಡುತ್ತಿzವೆ. ನಮಗೆ ಪಾರ್ಟಿ ಇಲ್ಲ. ನಾವು ಒಕ್ಕಲಿಗರು ಎಂದವರು ಹೇಳಿದರು.
ಸುಳ್ಯದಲ್ಲಿ ಮೀಸಲಾತಿ ಬದಲಾಗಬೇಕು: ಸುಳ್ಯದಲ್ಲಿ ಎಷ್ಟೋ ವರ್ಷಗಳಿಂದ ಇರುವ ಮೀಸಲಾತಿ ಇನ್ನೂ ಬದಲಾಗಿಲ್ಲ.ಅಲ್ಲಿ ಸಮುದಾಯದವರಿಗೆ ಅವಕಾಶ ತುಂಬಾ ಇದೆ.ಆದರೆ ಮೀಸಲಾತಿಯಿಂದ ಅಲ್ಲಿಗೆ ಹೋಗಲು ಆಗುತ್ತಿಲ್ಲ. ಸುಳ್ಯದಲ್ಲಿ ಮೀಸಲಾತಿ ಬದಲಾವಣೆ ಮಾಡಿ ಸಾಮಾನ್ಯ ಕ್ಷೇತ್ರವನ್ನು ತರಬೇಕೆಂದು ನಮ್ಮ ಬೇಡಿಕೆಯಿದೆ.ಅದನ್ನು ಮುಂದಿನ ದಿನಗಳಲ್ಲಿ ಆಗ್ರಹಿಸಲಿzವೆ.ನಮಗೆ ಎಲ್ಲಾ ಪಕ್ಷದವರೂ ಬೇಕು. ಯಾರನ್ನೂ ದೂಷಣೆ ಮಾಡುವುದಿಲ್ಲ, ಸಂಖ್ಯೆಗನುಗುಣವಾಗಿ ನಮಗೆ ಪ್ರಾತಿನಿಧ್ಯ ಕೊಡಬೇಕು ಎಂದು ಪ್ರಧಾನ ಕಾರ್ಯದರ್ಶಿ ಡಾ|ಎನ್.ಎ.ಜ್ಞಾನೇಶ್ ಹೇಳಿದರು.
ಘಟ್ಟದ ಮೇಲೆ ಜಾತಿ ಆಧಾರಿತ: ನಾವು ಇಲ್ಲಿ ಮಾತ್ರ ಜಾತಿ ಬೇಡ ಎಂದು ಹೇಳುವುದು.ಅದೇ ಘಟ್ಟದ ಮೇಲೆ ಹೋದರೆ ಲಿಂಗಾಯಿತ, ಕುರುಬ ಮತ್ತೊಂದು ಹೇಳುವುದು ಮಾಧ್ಯಮಗಳ ಮೂಲಕವೇ ನೋಡಿzವೆ. ಹಾಗಾಗಿ ದಕ್ಷಿಣ ಕನ್ನಡದಲ್ಲೂ ನಾವು ನಮ್ಮ ಸಮುದಾಯಕ್ಕೆ ಅವಕಾಶ ಕೊಡಬೇಕೆಂದು ಹೇಳುವುದು.ನಮ್ಮಲ್ಲೂ ಒಳ್ಳೆಯ, ಅರ್ಹ ವ್ಯಕ್ತಿಗಳಿದ್ದಾರೆ.ಅರ್ಹತೆಯನ್ನು ನೋಡಿ ಉತ್ತಮ ಸ್ಥಾನ ನಮಗೂ ಕೊಡಿ ಎಂದು ಎಲ್ಲಾ ರಾಜಕೀಯ ಪಕ್ಷಕ್ಕೆ ಮನವಿ ಮಾಡುತ್ತೇವೆ.ಅದೇ ರೀತಿ ಪಕ್ಷದ ಕಡೆಯಿಂದ ಮತ ಕೇಳಲು ಹೋಗುವುದಿಲ್ಲ.ನಮಗೆ ಎಲ್ಲಾ ಪಕ್ಷದವರು ಬೇಕು ಎಂದು ಡಾ| ಎನ್.ಎ.ಜ್ಞಾನೇಶ್ ಹೇಳಿದರು.
ಬಿಜೆಪಿಯಲ್ಲಿ ಕಾರ್ಯಕರ್ತರು ಜಾಸ್ತಿ ಕಾಂಗ್ರೆಸ್ನವರೂ ಅವಕಾಶ ಕೊಟ್ಟು ನೋಡಲಿ: ಕಾಂಗ್ರೆಸ್ನವರು ೭೦ ವರ್ಷದಿಂದ ಇಲ್ಲಿನ ತನಕ ನಮಗೆ ಅವಕಾಶ ಕೊಡಲಿಲ್ಲ.ಬಿಜೆಪಿಯವರು ಕೊಟ್ಟದ್ದಾರೆ.ಹಾಗಾಗಿ ನಮ್ಮ ಸಮುದಾಯದವರು ಬಿಜೆಪಿಯಲ್ಲಿ ಜಾಸ್ತಿ ಇದ್ದಾರೆ.ಈಗ ಕಾಂಗ್ರೆಸ್ನವರು ಒಮ್ಮೆ ಅವಕಾಶ ಕೊಟ್ಟು ನೋಡಲಿ.ಅವಕಾಶ ಕೊಟ್ಟು ನೋಡಿದರೆ ಎಲ್ಲಾ ರೀತಿಯಲ್ಲಿಯೂ ಗೆಲುವಿಗೆ ಅವಕಾಶ ಜಾಸ್ತಿ ಇದೆ.ನಾವು ರಾಜ್ಯದ ಕುರಿತು ಮಾತನಾಡುವುದಿಲ್ಲ ಯಾಕೆಂದರೆ ರಾಜ್ಯದಲ್ಲಿ ಅವಕಾಶ ಸಿಕ್ಕಿದೆ.ನಮಗೆ ದಕ್ಷಿಣ ಕನ್ನಡ ಜಿಲ್ಲೆ ಮುಖ್ಯ.ಈ ಭಾಗದಲ್ಲಿ ನಮಗೆ ಅವಕಾಶ ಸಿಗಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ಬಾಲಕೃಷ್ಣ ಡಿ.ಬಿ ಉತ್ತರಿಸಿದರು.ಧ್ವನಿಗೂಡಿಸಿದ ಡಾ.ಎನ್.ಎ ಜ್ಞಾನೇಶ್ ಅವರು ಬಿಜೆಪಿಯಿಂದ ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಸಂಜೀವ ಮಠಂದೂರು ಅವರಿಗೆ ಅವಕಾಶ ನೀಡಿದ್ದಾರೆ.ಮಡಿಕೇರಿಯಲ್ಲಿ ಬೋಪಯ್ಯನವರಿಗೆ ಕೊಟ್ಟಿದ್ದಾರೆ.ಆದರೆ ಒಂದು ಪಕ್ಷದಿಂದ ಈ ಅವಕಾಶ ಸಿಗುತ್ತಿಲ್ಲ.ಅದನ್ನು ಅವರು ಸೇರಿದಂತೆ ಎಲ್ಲಾ ಪಕ್ಷದವರು ಮಾಡಬೇಕು ಎಂದು ಹೇಳಿದರು.
ಸಂಪ್ರದಾಯಕ್ಕೆ ಗೌರವ ನೀಡದಿದ್ದರೆ ಸಂಘದಿಂದ ಸರಿಯಾದ ಉತ್ತರ: ಡಿಜಿಟಲ್ ಮೀಡಿಯಾವೊಂದರಲ್ಲಿ, ನಮ್ಮ ಸಮುದಾಯ ಬರೀ ೮೦ ಸಾವಿರ ಎಂದು ಉಲ್ಲೇಖಿಸಿದ್ದರು.ಈ ಕುರಿತು ನಾವು ಅವರನ್ನು ಪ್ರಶ್ನಿಸಿzವೆ.ಚುನಾವಣೆ ಬಂದಾಗ ಈ ರೀತಿ ಸುಳ್ಳು ವರದಿಗಳನ್ನು ಮಾಡುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ಬಾಲಕೃಷ್ಣ ಡಿ.ಬಿ.ಅವರು ಹೇಳಿದಾಗ,ಮಾಧ್ಯಮವನ್ನು ದೂಷಿಸುವುದು ಸರಿಯಲ್ಲ ಎಂದು ಪತ್ರಕರ್ತರು ತಿಳಿಸಿದರು.ಡಾ|ಎನ್.ಎ.ಜ್ಞಾನೇಶ್ ಅವರು ಮಾತನಾಡಿ ಇತ್ತೀಚೆಗೆ ಯಾರೋ ಒಬ್ಬರು ಒಕ್ಕಲಿಗರಿಗೆ ಸಂಸ್ಕೃತಿ ಇಲ್ಲ ಎಂದು ಹೇಳಿಕೆ ನೀಡಿದ್ದರು.ಮಂಗಳೂರಿನಲ್ಲೂ ಯಾರೋ ಒಬ್ಬರು ಸಮುದಾಯವನ್ನು ದೂಷಿಸಿದ್ದಾರೆ.ಇಂತಹ ಘಟನೆ ನಡೆಯಬಾರದು ಎಂಬುದು ನಮ್ಮ ಆಗ್ರಹ.ಸಂಪ್ರದಾಯಕ್ಕೆ ಗೌರವ ನೀಡಬೇಕು.ಮುಂದೆ ಇಂತಹ ಘಟನೆ ಮರುಕಳಿಸಿದರೆ ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸಂಘ ಪ್ರತ್ಯುತ್ತರ ನೀಡಲಿದೆ ಎಂದರು.
ಮಂಗಳೂರಿನಲ್ಲಿ ಸಮುದಾಯ ಭವನ ನಿರ್ಮಾಣದ ಬೇಡಿಕೆ: ಮಂಗಳೂರಿನಲ್ಲಿ ರಾಜ್ಯಮಟ್ಟದ ದೊಡ್ಡ ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇದೆ.ನಮ್ಮ ಸಂಘದ ಪ್ರತಿ ತಾಲೂಕಿನಲ್ಲೂ ಸಮುದಾಯ ಭವನ ನಿರ್ಮಾಣ ಆಗಿದೆ.ಅದೇ ರೀತಿ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಸಮುದಾಯ ಭವನ ಆಗಬೇಕು.ಪುತ್ತೂರಿನಲ್ಲಿ ನಿನ್ನೆ ಬಹಳ ದೊಡ್ಡ ಮಟ್ಟದ ಕ್ರೀಡಾಕೂಟ ನಡೆದಿದೆ.ಫೆ.೧೭ ಮತ್ತು ೧೮ಕ್ಕೆ ಯುವ ಗೌಡರ ಸಂಘದಿಂದ ಸಹ್ಯಾದ್ರಿ ಕಾಲೇಜಿನಲ್ಲಿ ದೊಡ್ಡ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದು ಡಾ|ಎನ್.ಎ.ಜ್ಞಾನೇಶ್ ಹೇಳಿದರು.
ಅವರಿಗೂ ಕೊಡಿ ನಮಗೂ ಕೊಡಿ: ಜಿಲ್ಲೆಯಲ್ಲಿ ಅತೀ ಹೆಚ್ಚು ಶಾಸಕರಿರುವುದು ಬಂಟ ಸಮುದಾಯದವರು.ಅವರೆಲ್ಲ ನಮ್ಮ ಸ್ನೇಹಿತರು.ಅವರಿಗೆ ಅವಕಾಶ ಸಿಕ್ಕಿದೆ.ಅದೇ ರೀತಿ ನಮಗೂ ಕೊಡಬೇಕೆಂದು ನಾವು ಕೇಳುವುದು.ಅವರ ಜನ ಸಂಖ್ಯೆಗೆ ಅನುಗುಣವಾಗಿ ನೋಡಿದರೆ ಅವರಿಗೆ ದೊರೆತ ಪ್ರಾತಿನಿಧ್ಯ ಹೆಚ್ಚಾಗಿದೆ.ಎಲ್ಲಿ ನಮ್ಮ ಸಂಖ್ಯೆ ಹೆಚ್ಚಿದೆಯೋ ಅಲ್ಲಿ ನಮ್ಮ ಸಮುದಾಯಕ್ಕೆ ಅವಕಾಶ ಕೊಡಬೇಕು.ಆದರೆ ಪ್ರಸ್ತುತ ಒಂದು ಎಮ್ಎಲ್ಎ ಆಗಲೀ, ಒಂದು ಎಮ್ಎಲ್ಸಿಯಾಗಲೀ ನಮ್ಮವರಿಲ್ಲ.ನಾವು ಎರಡು ರಾಷ್ಟ್ರೀಯ ಪಕ್ಷಗಳಲ್ಲೇ ಅವಕಾಶ ಕೇಳುವುದು.ಉಳಿದ ಪಕ್ಷಗಳು ನಗಣ್ಯ ಎಂದು ಬಾಲಕೃಷ್ಣ ಡಿ.ಬಿ ಹೇಳಿದರು.
ಲೋಕಸಭೆ, ವಿಧಾನಸಭೆ ಮಾತ್ರ ಕೇಳುತ್ತಿಲ್ಲ ಎಲ್ಲಾ ಕ್ಷೇತ್ರದಲ್ಲೂ ಅವಕಾಶ ಸಿಗಬೇಕು: ಜಾತ್ಯಾತೀತ ರಾಷ್ಟ್ರ ಎಂದು ಹೇಳುತ್ತಾರೆ.ಕೊನೆಗೆ ಅಭ್ಯರ್ಥಿ ಪಟ್ಟಿಯಲ್ಲಿ ಇಷ್ಟು ಮಂದಿ ಲಿಂಗಾಯಿತರು, ಒಕ್ಕಲಿಗರಿಗೆ, ಕುರುಬರಿಗೆ ಎಂದು ಉಲ್ಲೇಖಿಸುತ್ತಾರೆ.ವಿಜೇತರಾದ ಬಳಿಕವೂ ಇಷ್ಟು ಜನ ಇಂತಹ ಸಮುದಾಯ ಎಂದು ಗುರುತಿಸುತ್ತಾರೆ.ಆ ಬಳಿಕ ಮಂತ್ರಿಗಳ ಆಯ್ಕೆ ವಿಚಾರದಲ್ಲೂ ಜಾತಿಯನ್ನು ಉಲ್ಲೇಖಿಸುತ್ತಾರೆ.ಒಟ್ಟಿನಲ್ಲಿ ಸಮುದಾಯದ ಹೆಸರಿನಲ್ಲಿ ಒಕ್ಕಲಿಗರನ್ನು ಕಡೆಗಣಿಸುತ್ತಾರೆ ಜಿಲ್ಲಾ ಮಟ್ಟದಲ್ಲಿ ಹಲವಾರು ಸಹಕಾರಿ ಸಂಸ್ಥೆಗಳಿವೆ.ಅದರಲ್ಲೂ ನಮ್ಮ ಸಮುದಾಯದವರಿಗೆ ಅವಕಾಶವಿಲ್ಲ.ಕ್ಯಾಂಪ್ಕೋ, ಕೆಎಂಎಫ್, ಎಸ್ಸಿಡಿಸಿಸಿ ಬ್ಯಾಂಕ್ ಇದೆ.ಬೇರೆ ಫೆಡರೇಶನ್ ಇದೆ.ಕ್ಯಾಂಪ್ಕೋದಲ್ಲಿ ಕೃಷ್ಣಪ್ರಸಾದ್ ಮಡ್ತಿಲ ಒಬ್ಬರನ್ನು ಬಿಟ್ಟರೆ ಬೇರೆ ಎಲ್ಲೂ ನಮ್ಮ ಸಮುದಾಯದ ಸದಸ್ಯರಿಲ್ಲ.ಕೃಷಿಕರು,ರೈತರು ಇರುವ ಸಂಸ್ಥೆಗಳಲ್ಲಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯವಿಲ್ಲ.ಬರೀ ಲೋಕಸಭೆ, ವಿಧಾನಸಭೆ ಮಾತ್ರ ಕೇಳುತ್ತಿಲ್ಲ.ಎಲ್ಲಾ ಕ್ಷೇತ್ರದಲ್ಲೂ ನಮ್ಮ ಸಮುದಾಯದವರಿಗೆ ಅವಕಾಶ ಸಿಗಬೇಕು.ಬೇರೆ ಜಾತಿಯವರನ್ನು ಕಡೆಗಣಿಸುತ್ತಿಲ್ಲ.ಅವರೂ ನಮಗೆ ಬೇಕು.ಅವರು ನಮ್ಮ ಸಹೋದರರು.ಅವರಿಗೆ ಕೊಡಬೇಡಿ ಎಂದು ಹೇಳುತ್ತಿಲ್ಲ.ನಮಗೆ ಸಿಗುವ ಪಾಲನ್ನು ಕೊಡಿ ಎಂದಷ್ಟೆ ನಾವು ಕೇಳುವುದು ಎಂದು ಡಾ|ಎನ್.ಎ.ಜ್ಞಾನೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಭಾಸ್ಕರ ಗೌಡ ದೇವಸ್ಯ, ಜಂಟಿ ಕಾರ್ಯದರ್ಶಿ ದಾಮೋದರ ಗೌಡ, ಕೋಶಾಧಿಕಾರಿಯಾಗಿರುವ ಪುತ್ತೂರು ಗೌಡ ಸಂಘದ ಮಾಜಿ ಅಧ್ಯಕ್ಷ ಕೆ.ವಿಶ್ವನಾಥ ಗೌಡ, ಜಂಟಿ ಕೋಶಾಧಿಕಾರಿ ಸೂರಜ್ ಕುಮಾರ್ ಯು, ಸಮಿತಿ ಸದಸ್ಯರಾದ ರಕ್ಷಿತ್ ಪುತ್ತಿಲ, ಕೆ.ವಿಜಯ ಗೌಡ, ಸೌಮ್ಯಲತಾ, ಯಶವಂತ ಕಳುವಾಜೆ, ಪುತ್ತೂರು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಗೌರಿ ಬನ್ನೂರು, ಶ್ರೀಕಾಂತ್ ಎಂ, ಎನ್.ಎ.ಅನೂಪ್, ಮಧುರಾ ಎಂ.ಆರ್, ವಿಶ್ವನಾಥ್ ಎನ್, ಸಾರಿಕಾ ಸುರೇಶ್, ಎಸ್.ಶಾಂತರಾಜ್, ಯು.ಎಸ್ ಲಿಂಗಯ್ಯ ಉಪಸ್ಥಿತರಿದ್ದರು.
ಈ ಸಂಘಟನೆ ರಾಜಕೀಯಕ್ಕಲ್ಲ
ಈ ಸಂಘಟನೆ ರಾಜಕೀಯಕ್ಕಲ್ಲ.ಆದರೆ ಈಗ ಚುನಾವಣೆ ಎದುರಿರುವುದರಿಂದ ಇದಕ್ಕೆ ಅವಕಾಶಕ್ಕಾಗಿ ಹೆಚ್ಚು ಮಹತ್ವ ಬಂದಿದೆ.ನಮ್ಮ ಸಂಘಟನೆ ಶೈಕ್ಷಣಿಕ,ವೈದ್ಯಕೀಯ, ರಾಜಕೀಯ, ಆರ್ಥಿಕತೆ ಮತ್ತು ಸಾಮಾಜಿಕವಾಗಿ ಸಮುದಾಯವನ್ನು ಸದೃಢಗೊಳಿಸಲು ಇರುವಂಥದ್ದು, ಪ್ರಸ್ತುತ ಚುನಾವಣೆಯಿಂದಾಗಿ ಅದಕ್ಕೆ ಹೆಚ್ಚು ಮಹತ್ವ ಬಂದಿದೆ- ಡಾ|ಎನ್.ಎ. ಜ್ಞಾನೇಶ್
ದಕ್ಷಿಣ ಕನ್ನಡ ಒಕ್ಕಲಿಗ ಗೌಡರ ಸಂಘ ರಿಜಿಸ್ಟರ್ ಆಗಿದೆ
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಈ ಹಿಂದಿನಿಂದಲೂ ಒಕ್ಕಲಿಗ ಸಂಘಗಳು ಬಲಿಷ್ಠವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕೆಲಸ ಕಾರ್ಯಗಳನ್ನು ನಡೆಸುತ್ತಾ ಬಂದಿದೆ.ಹಾಗಾಗಿ ಜಿಲ್ಲೆಯಾದ್ಯಂತ ಬೇರೆ ಬೇರೆ ಸಮುದಾಯ ಸಂಘಟನೆಗಳಿದ್ದರೂ, ಒಕ್ಕಲಿಗ ಸಮುದಾಯವನ್ನು ಇನ್ನಷ್ಟು ಪ್ರಬಲಗೊಳಿಸುವ ನಿಟ್ಟಿನಲ್ಲಿ ಉದಯೋನ್ಮುಖವಾಗಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರು ಸಂಘವನ್ನು ರಿಜಿಸ್ಟರ್ ಮಾಡಿzವೆ.ಈ ಹಿಂದೆಯೂ ಸಂಘ ಇತ್ತು.ಆದರೆ ಅದು ನೋಂದಾವಣೆ ಆಗಿರಲಿಲ್ಲ.ರಾಜ್ಯ, ತಾಲೂಕು, ಗ್ರಾಮ ಗ್ರಾಮಗಳಲ್ಲಿ ಸಂಘಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ.ಇದಕ್ಕೆ ಕೊಂಡಿಯಾಗಿ ಸಂಘ ಕೆಲಸ ಮಾಡಲಿದೆ.ಇತ್ತೀಚೆಗೆ ಕಡಬದಲ್ಲಿ ಆದಿಚುಂಚನಗಿರಿ ಮಹಾಸ್ವಾಮಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಸೂಚನೆಯಂತೆ ಸಂಘ ರಿಜಿಸ್ಟರ್ ಆಗಿದೆ.ನಮ್ಮ ಸಮಾಜದ ಎಲ್ಲಾ ಕಾರ್ಯಕ್ರಮಗಳು ರಾಜ್ಯ ಒಕ್ಕಲಿಗ ಗೌಡ ನೀಡುವ ಕೊಡುಗೆಗಳನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅದನ್ನು ತಾಲೂಕು, ಗ್ರಾಮ ಸಂಘಗಳಿಗೆ ವಿಸ್ತರಿಸುವ ವಿಚಾರವನ್ನು ಮುಂದಿಟ್ಟಿದ್ದೇವೆ. ಈ ಸಂಘದಲ್ಲಿ ಪ್ರತಿ ತಾಲೂಕಿನಲ್ಲಿ ಆಯ್ಕೆಗೊಂಡವರು ನಿರ್ದೇಶಕರಾಗಿರುತ್ತಾರೆ.ಶೈಕ್ಷಣಿಕ, ವೈದ್ಯಕೀಯ, ರಾಜಕೀಯ, ಆರ್ಥಿಕತೆ ಮತ್ತು ಸಾಮಾಜಿಕವಾಗಿ ನಮ್ಮ ಸಮುದಾಯದವರನ್ನು ಸದೃಢಗೊಳಿಸಿ ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವುದು ನಮ್ಮ ಸಂಘದ ಧ್ಯೇಯೋzಶವಾಗಿದೆ ಎಂದು ಬಾಲಕೃಷ್ಣ ಡಿ.ಬಿ ಹೇಳಿದರು.