ಆಲೆಟ್ಟಿ ಸದಾಶಿವ ದೇವರ ಜಾತ್ರೋತ್ಸವದ ಧ್ವಜಾರೋಹಣ- ಸಾಂಸ್ಕೃತಿಕ ಕಾರ್ಯಕ್ರಮ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಧ್ವಜಾರೋಹಣವು ಕುಂಟಾರು ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ಫೆ.14 ರಂದು ನೆರವೇರಿತು.

ಬಳಿಕ ದೇವರ ಉತ್ಸವ ಬಲಿ ನಡೆದು ದೇವರಿಗೆ ಪೂಜೆಯು ನೆರವೇರಿತು. ರಾತ್ರಿ ಗ್ರಾಮದ ಶಾಲಾ ಮಕ್ಕಳಿಂದ ಹಾಗೂ ಅಂಗನವಾಡಿ ಕೇಂದ್ರ ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಯಿತು. ಬಡ್ಡಡ್ಕ ರಾಮಕೃಷ್ಣ .ಅ.ಹಿ.ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗಳಿಂದ ನಾಯಕ ಪಟ್ಟ ನಾಟಕ ಹಾಗೂ ಆಲೆಟ್ಟಿ ನಾರ್ಕೋಡು ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸೆಂಗೊಲ್ ಎಂಬ ನಾಟಕ ಪ್ರದರ್ಶನವಾಯಿತು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮತ್ತು ಪ್ರವೀಣ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು.