ಕೊಯನಾಡಿನಲ್ಲಿ ಆನೆ ದಾಳಿಯಿಂದ ಕೃಷಿ ನಾಶ

0

ಸಂಪಾಜೆ ಗ್ರಾಮದ ಕೊಯನಾಡಿನ ಕುಂದಲ್ಪಾಡಿ ಎಂಬಲ್ಲಿ ಫೆ. ೧೫ರ ರಾತ್ರಿ ತೋಟಕ್ಕೆ ಆನೆ ದಾಳಿ ಮಾಡಿದ್ದು ಅಪಾರ ಹಾನಿ ಉಂಟುಮಾಡಿದೆ. ಆನೆ ದಾಳಿಯಿಂದ ತೆಂಗಿನ ಮರ, ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿದೆ. ಜಯಪ್ರಕಾಶ್ ಅವರ ತೋಟದಲ್ಲಿ ೮ ತೆಂಗಿನ ಮರ ಹಾಗೂ ಬಾಳೆ ಹಾಗೂ ಅಡಿಕೆ ಗಿಡಗಳನ್ನು, ಪದ್ಮನಾಭ ಅವರ ತೋಟದಲ್ಲಿ ನಾಲ್ಕು ತೆಂಗಿನ ಮರ, ಬಾಳೆ ಅಡಿಕೆ ಗಿಡಗಳನ್ನು ಹಾಗೂ ಹರೀಶ ಅವರ ತೋಟದಲ್ಲೂ ಕೃಷಿ ಹಾನಿ ಮಾಡಿರುವುದಾಗಿ ತಿಳಿದು ಬಂದಿದೆ.