ಸುಬ್ರಹ್ಮಣ್ಯ ದೇವಸ್ಥಾನದ ನೂತನ ಭಂಡಿರಥ ನಿರ್ಮಾಣ ಕಾರ್ಯಕ್ಕೆ ರಥಶಿಲ್ಪಿ ರಾಜಗೋಪಾಲರಿಗೆ ವೀಳ್ಯ ನೀಡಿ ಗೌರವ

0

ಹೈದರಬಾದ್ ಮೂಲದ ಸಾಯಿ ಶ್ರೀನಿವಾಸ್ ರಿಂದ ಕೊಡುಗೆ : ಮೇ.2ನೇ ವಾರದಲ್ಲಿ ರಥದ ಕೆಲಸ ಪೂರ್ಣ!

ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ಭಂಡಿರಥವನ್ನು ದಾನಿಯೊಬ್ಬರು ಕೊಡುಗೆಯಾಗಿ ನೀಡಿದ್ದು, ಭಂಡಿರಥ ನಿರ್ಮಿಸಲಿರುವ ಕೋಟೇಶ್ವರದವರಿಗೆ ಫೆ.12ರಂದು ವೀಳ್ಯ ನೀಡಲಾಯಿತು.

ಮೋಹನದಾಸ್ ರೈ ಅವರ ಅಪ್ತರಾಗಿದ್ದ ಹೈದರಬಾದ್ ಮೂಲದ ಸಾಯಿ ಶ್ರೀನಿವಾಸ್ ಇತ್ತಿಚೆಗೆ ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭ ಈ ಕೊಡುಗೆ ಘೋಷಣೆ ಮಾಡಿದ್ದರು. ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರಿಗೆ ಶ್ರೀನಿವಾಸ್ ನಿರ್ದೇಶನದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು ಹಾಗೂ ಸುಬ್ರಹ್ಮಣ್ಯದ ಮೋಹನದಾಸ ರೈ 12,50,001.00 ಹಣ ಪಾವತಿಸಿ ರಥ ನಿರ್ಮಿಸಲು ವೀಳ್ಯ ನೀಡಲಾಗಿದೆ. ಮೇ.2 ನೇ ವಾರದಲ್ಲಿ ರಥದ ಕೆಲಸ ಪೂರ್ಣವಾಗಲಿದ್ದು ಇದು 16 ಅಡಿ ಎತ್ತರ ಇರಲಿದೆ ಎಂದು ತಿಳಿದು ಬಂದಿದೆ. ಶ್ರೀನಿವಾಸ್ ಅವರು ಅನ್ನದಾನಕ್ಕೂ 2 ಲಕ್ಷ ಹಣ ಕೊಡುಗೆಯನ್ನು ನೀಡಿದ್ದಾರೆ.