ಮೊಗರ್ಪಣೆ ಎಂ ಆರ್ ಡಿ ಎ ವತಿಯಿಂದ ದಾನಿಗಳ ಸಹಕಾರದಿಂದ ಸ್ವಯಂ ಸೇವಕರಿಗೆ ಟೀಶರ್ಟ್ ವಿತರಣೆ

0

ಮೊಗರ್ಪಣೆ ಜುಮಾಮಸೀದಿ ಅದೀನದಲ್ಲಿ ಐದು ದಶಕಗಳಿಂದ ಕಾರ್ಯಚರಿಸಿಕೊಂಡು ಬರುತ್ತಿರುವ ಮುಹಿಯದ್ದೀನ್ ರಿಫಾಯಿ ದಫ್ ಅಸೋಸಿಯೇಷನ್ (ಎಂ ಆರ್ ಡಿ ಎ) ಇದರ ವತಿಯಿಂದ ದಾನಿಗಳ ಸಹಕಾರ ಪಡೆದು ಸಂಘದಲ್ಲಿ ತೊಡಗಿಸಿಕೊಂಡ ಸ್ವಯಂಸೇವಕರಿಗೆ ಟೀ ಶರ್ಟ್ ವಿತರಣಾ ಕಾರ್ಯಕ್ರಮ ಫೆಬ್ರವರಿ 18 ರಂದು ಮಸೀದಿ ವಠಾರದಲ್ಲಿ ನಡೆಯಿತು.
ದಫ್ ಸಮಿತಿಯ ಅಧ್ಯಕ್ಷ ಜಲೀಲ್ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಸ್ಥಳೀಯ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮದರ್ರಿಸ್ ಆಫಿಲ್ ಸೌಕತ್ ಅಲಿ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಜಮಾಅತ್ ಕಮಿಟಿಯ ಸದಸ್ಯರು, ದಫ್ ಅಸೋಸಿಯೇಷನ್ ಸಮಿತಿಯ ಪದಾಧಿಕಾರಿಗಳು ಸದಸ್ಯರು ಸ್ಥಳೀಯರು ಉಪಸ್ಥಿತರಿದ್ದರು.
ಗೌರವ ಅಧ್ಯಕ್ಷ ಹಾಜಿ ಉಮ್ಮರ್ ಸ್ವಾಗತಿಸಿ ಸಂಶುದ್ದೀನ್ ಮೂಸಾನ್ ಕಾರ್ಯಕ್ರಮ ನಿರೂಪಿಸಿದರು.
ಟೀ ಶರ್ಟ್ ಧಾನಿಗಳಾಗಿ ಹಾಜಿ ಇಬ್ರಾಹಿಂ ಸೀ ಫುಡ್, ಜಬ್ಬಾರ್ ಲ್ಯಾಂಡ್ ಲಿಂಕ್ಸ್,ಸುಳ್ಯ ಮಂಗಳೂರು ಫರ್ನಿಚರ್ಸ್ ಸಂಸ್ಥೆಯವರು ಸಹಕಾರ ನೀಡಿದರು.
ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಸರ್ವಿಸ್ ವಿಭಾಗದಲ್ಲಿ ಸೇವೆ ಸಲ್ಲಿಸಲು ಸಮಿತಿಯ ಸ್ವಯಂ ಸೇವಕರನ್ನು ಸಂಘದ ವತಿಯಿಂದ ಕಳುಹಿಸಿಕೊಡಲಾಗುವುದು ಎಂದು ಸಂಘಟಕರು ಈ ಸಂದರ್ಭದಲ್ಲಿ ತಿಳಿಸಿದರು.