ಮಹಾಲಿಂಗ ಮಣಿಯಾಣಿ ನೂಚಿಲ ನಿಧನ

0

ಸುಬ್ರಹ್ಮಣ್ಯ ಗ್ರಾಮದ ನೂಚಿಲ ನಿವಾಸಿ ಮಹಾಲಿಂಗ ಮಣಿಯಾಣಿ ಫೆ. 16ರಂದು ಅಲ್ಪಕಾಲದ ಅಸೌಖ್ಯತೆಯಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮಹಾಲಿಂಗ ಅವರು ಶ್ರೀ ಮಹಾವಿಷ್ಣು ಮೂರ್ತಿ ದೈವದ ಪೂಜಾರಿಯಾಗಿ ಕೆಲಸ ನಿರ್ವಹಿಸುತಿದ್ದರು. ಕುಲ್ಕುಂದ, ಗಡಿಕಲ್ಲು, ಕೇವಳ, ಅಚ್ರಪ್ಪಾಡಿ ಮತ್ತಿತರ ಕಡೆ ವಿಷ್ಣುಮೂರ್ತಿ ದೈವದ ಪೂಜಾರಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಸರಸ್ವತಿ, ಮಕ್ಕಳಾದ ಶ್ರೀಮತಿ ವಿಜೇತ ಸುಭಾಷ್ ನೂಚಿಲ, ಶ್ರೀಮತಿ ಜ್ಯೋತಿ ಶಿವರಾಮ ಸಾರಡ್ಕ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.