ದುಗ್ಗಲಡ್ಕ- ನೀರಬಿದಿರೆ ರಸ್ತೆ ಕಾಂಕ್ರೀಟೀಕರಣ; ಫೆ.20ರಿಂದ ಸಂಚಾರಕ್ಕೆ ಮುಕ್ತ

0

ದುಗ್ಗಲಡ್ಕ- ಕೊಡಿಯಾಲಬೈಲ್-ಸುಳ್ಯ ರಸ್ತೆಯ ನೀರಬಿದಿರೆ ಎಂಬಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಫೆ.20ರಿಂದ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ದುಗ್ಗಲಡ್ಕ- ಕೊಡಿಯಾಲಬೈಲ್ ರಸ್ತೆಗೆ ಮಾಜಿ ಸಚಿವರಾದ ಎಸ್.ಅಂಗಾರರವರು ಚುನಾವಣಾ ಪೂರ್ವದಲ್ಲಿ ರೂ.25 ಲಕ್ಷ ಅನುದಾನ ಇಟ್ಟಿದ್ದರು. ಆಗ ಕಾಂಕ್ರೀಟೀಕರಣಕ್ಕಾಗಿ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಬಳಿಕ ಚುನಾವಣೆ ಬಂದುದರಿಂದ ಕಾಂಕ್ರೀಟೀಕರಣಗೊಳ್ಳಲಿಲ್ಲ.

ಇದೀಗ ಆ ಮೊತ್ತದಲ್ಲಿ ದುಗ್ಗಲಡ್ಕ ರಾಮ ಮಣಿಯಾಣಿಯವರ ಮನೆಯ ಬಳಿಯಿಂದ 346 ಮೀಟರ್ ಉದ್ದ ಕಾಂಕ್ರೀಟ್ ಕಾಮಗಾರಿ ನಡೆದಿದೆ. ಕಾಮಗಾರಿಯನ್ನು ಪ್ರಥಮ ದರ್ಜೆ P.W.D. ಗುತ್ತಿಗೆದಾರರಾದ ಎಸ್.ಎನ್.ಶ್ರೀಧರ್ ಅರಕಲಗೂಡು ಹಾಸನ ಇವರು ನಿರ್ವಹಿಸಿದ್ದರು. ಇದಕ್ಕಾಗಿ ಸುಮಾರು 20 ದಿನಗಳಿಂದ ರಸ್ತೆ ಬಂದ್ ಮಾಡಲಾಗಿತ್ತು. ಫೆ.20ರಿಂದ ಮತ್ತೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ.