ಮುಕ್ಕೂರು : ನಳೀಲು ಕ್ಷೇತ್ರಕ್ಕೆ ಹಸುರುವಾಣಿ ಸಮರ್ಪಣೆ

0

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶ ಹಾಗೂ ವಾರ್ಷಿಕ ಜಾತ್ರೆ ಪ್ರಯುಕ್ತ ಮುಕ್ಕೂರು ಭಕ್ತವೃಂದದಿಂದ ಹಸುರು ಹೊರೆಕಾಣಿಕೆ ಮೆರವಣಿಗೆಯು ಫೆ.18 ರಂದು ನಡೆಯಿತು.

ಮುಕ್ಕೂರು ಹಾಲಿನ ಡಿಪೋ ಬಳಿ ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ದೇವರ ಸೇವೆಗಳನ್ನು ಬೇರೆ ಬೇರೆ ರೂಪದಲ್ಲಿ ಸಲ್ಲಿಸಲು ಅವಕಾಶ ಇದೆ. ಹಸುರುವಾಣಿ ಸಮರ್ಪಣೆಯು ಅದರ ಒಂದು ಭಾಗ. ನಾವು ಭಕ್ತಿಯಿಂದ ಸಲ್ಲಿಸುವ ಸೇವೆಗೆ ಭಗವಂತನ ಫಲ ಸಿಗುತ್ತದೆ ಎಂದರು.

ಮುಕ್ಕೂರು ವಾರ್ಡ್‌ನ 66 ಮಂದಿ ಭಕ್ತರು ಸುಮಾರು 10 ಕಿಂಟ್ವಾಳ್‍ಗೂ ಅಧಿಕ ವಸ್ತುಗಳನ್ನು ಹಸುರುವಾಣಿ ಮೂಲಕ ಸಮರ್ಪಿಸಿದರು. ಮುಕ್ಕೂರು, ಚೆನ್ನಾವರ, ಪಾಲ್ತಾಡಿ ಮೂಲಕ ಹಸುರುವಾಣಿ ಹೊತ್ತ ವಾಹನವು ನಳೀಲು ಕ್ಷೇತ್ರ ಪ್ರವೇಶಿಸಿತ್ತು. ದೇವಾಲಯದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಹಾಗೂ ಸಮಿತಿ ಸದಸ್ಯರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಮುಕ್ಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಶ್ರೀ ಜಲದುರ್ಗಾದೇವಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ, ಉಮೇಶ್ ಕೆಎಂಬಿ, ಕಾನಾವು ಕ್ಲಿನಿಕ್‍ನ ವೈದ್ಯ ಡಾ|ನರಸಿಂಹ ಶರ್ಮಾ ಕಾನಾವು, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ನಳೀಲು ಬ್ರಹ್ಮಕಲಶ ಸಮಿತಿಯ ಪ್ರಚಾರ ಮತ್ತು ಮಾಧ್ಯಮ ಸಮಿತಿಯ ಸಹ ಸಂಚಾಲಕ ಪ್ರವೀಣ್ ಚೆನ್ನಾವರ, ಪ್ರಗತಿಪರ ಕೃಷಿಕರಾದ ಗೋಪಾಲಕೃಷ್ಣ ಭಟ್ ಮನವಳಿಕೆ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಸತ್ಯಪ್ರಸಾದ್ ಕಂಡಿಪ್ಪಾಡಿ, ಪೆರುವಾಜೆ ಶ್ರೀ ಜಲದುರ್ಗಾದೇವಿ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ನಾರಾಯಣ ಕೊಂಡೆಪ್ಪಾಡಿ, ದೇವಕಿ ಪೂವಪ್ಪ ಪೂಜಾರಿ ಮುಕ್ಕೂರು, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ಕುಂಡಡ್ಕ, ಮುಕ್ಕೂರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಮುಕ್ಕೂರು ಭಕ್ತವೃಂದದ ಪುಟ್ಟಣ್ಣ ಗೌಡ ಅಡ್ಯತಕಂಡ, ಭಾಸ್ಕರ ಕುಂಡಡ್ಕ, ವಸಂತ ಕುಂಡಡ್ಕ, ಪುರಂದರ ಪಾಲ್ತಾಡು, ಪ್ರಸಾದ್ ನಾಯ್ಕ ಕುಂಡಡ್ಕ ಮೊದಲಾದವರು ಉಪಸ್ಥಿತರಿದ್ದರು.