ಕೈಯಲ್ಲಿ ಪಟಾಕಿ ಸಿಡಿದು ಗಾಯಗೊಂಡಿದ್ದ ಯುವಕನಿಗೆ ಮಂಗಳೂರಿನಲ್ಲಿ‌ ಚಿಕಿತ್ಸೆ

0

ಪಟಾಕಿ ಸಿಡಿಸಿದ ಸಮಯ ಅದು ಕೈಯಲ್ಲೇ ಸಿಡಿದು‌ ಯುವಕ ಗಂಭೀರ ಗಾಯಗೊಂಡಿದ್ದು, ಆತನಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಉಬರಡ್ಕ ಕಾಲೊನಿಯಲ್ಲಿ ಫೆ.18ರಂದು ಪೂಜಾ ಕಾರ್ಯಕ್ರಮ ಇತ್ತು. ಈ ವೇಳೆ ಭಾನುಪ್ರಕಾಶ್ (ಸಂದೀಪ್) ಎಂಬವರು ಪಟಾಕಿಯನ್ನು ಕೈಯಲ್ಲಿ ಹಿಡಿದು ಎಸೆಯುತ್ತಿದ್ದಾಗ, ಪಟಾಕಿಯೊಂದು ಕೈಯಲ್ಲೆ ಸಿಡಿಯಿತು. ಅದರ ಕಿಡಿ ವೃಷಣಕ್ಕೆ ತಾಗಿ ಅಲ್ಲಿಗೂ ಗಾಯವಾಯಿತು. ತಕ್ಷಣ ಅಲ್ಲಿದ್ದವರು ಭಾನುಪ್ರಕಾಶರನ್ನು ಸುಳ್ಯ ಆಸ್ಪತ್ರೆಗೆ ಕರೆತಂದರು. ವೈದ್ಯರು ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ, ಉಬರಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್‌ ಉಬರಡ್ಕ ಮತ್ತಿತರರು ಸೇರಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.