ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉತ್ಕರ್ಷ ಸೌಧದಲ್ಲಿ ಪ್ರಶಾಂತ್ ಅಳ್ಪೆ ರವರ ಮಾಲಕತ್ವದ”ಪಂಚಮುಖಿ” ಸ್ವೀಟ್ಸ್ -ಜ್ಯೂಸ್, ಚಾಟ್ಸ್ ,ಕ್ಯಾಂಟೀನ್ ಜ.12 ರಂದು ಸ್ಥಳಾಂತರ ಗೊಂಡು ಶುಭಾರಂಭ ಗೊಂಡಿತು. ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ದೈವ ಪರಿಚಾರಕ ಚಂದ್ರಶೇಖರ ಕೋಡಿ ಉದ್ಘಾಟಿಸಿ ಶುಭಹಾರೈಸಿದರು.
ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಗಣೇಶ್ ಪೈ, ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ , ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ , ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ। ದೇವಿಪ್ರಸಾದ್ ಕಾನತ್ತೂರ್,
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು, ಯುವ ತೇಜಸ್ಸು,ಸಂಯೋಜಕ ಆಶಿತ್ ಕಲ್ಲಾಜೆ, ಚಿಂಗಾಣಿಗುಡ್ಡೆ ಜೈ ಕರ್ನಾಟಕ ಯುವಕ ಮಂಡಲದ ಅಧ್ಯಕ್ಷ ವಿದ್ಯಾನಂದ ಮೇಲ್ಮನೆ , ಶ್ರೀ ಉಳ್ಳಾಕುಲು ಕಲಾ ರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ , ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಸಂಪರ್ಕ ಪ್ರಮುಖ್ ದಯಾನಂದ ಮೇಲ್ಮನೆ , ಶಿವಾಜಿ ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ , ಪಂಜ ಸಂಗಾತಿ ಸ್ಟೋರ್ ಮಾಲಕ ವಂಕಟರಮಣ ಭಟ್, ಪೈಂದೋಡಿ ಶ್ರೀ ಸುಬ್ರಾಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭವಾನಿಶಂಕರ ಪಾಲೋಳಿ, ಪಂಜ ಪರಿವಾರ ರೈತ ಉತ್ಪಾದಕರ ಕಂಪೆನಿ ತೀರ್ಥಾನಂದ ಕೊಡೆಂಕಿರಿ, ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ, ಚಿಂಗಾಣಿಗುಡ್ಡೆ ಕೃಪಾ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಶಿರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಅಳ್ಪೆ ಸ್ವಾಗತಿಸಿದರು ಶ್ರೀಮತಿ ಕಾವ್ಯ ಪ್ರಕಾಶ್ ಪ್ರಾರ್ಥಿಸಿದರು.ಗುರುಪ್ರಸಾದ್ ತೋಟ ನಿರೂಪಿಸಿದರು. ಶ್ರೀಮತಿ ಧನ್ಯ ಪ್ರಶಾಂತ್ ವಂದಿಸಿದರು.
ನಮ್ಮಲ್ಲಿ ಚಾ, ಕಾಫಿ, ತಿಂಡಿ, ದೋಸೆ ಐಟಮ್ಸ್ ಸ್ವೀಟ್ಸ್ ಐಟಮ್ಸ್, ಮಸಾಲಪೂರಿ, ಪಾನಿಪೂರಿ, ದಹೀಪೂರಿ, ಸೇವ್ ಪೂರಿ, ಬೇಲ್ ಪೂರಿ, ವೆಜ್ ಸೂಪ್, ಗಡ್ಬಡ್, ದಿಲ್ಖುಷ್, ಪ್ರೊಟ್ಸ್ ಸಲಾಡ್, ಪಂಚಮುಖ ಸ್ಪೆಷಲ್ ಐಸ್ಕ್ರೀಂ, ಫ್ರೆಶ್ ಜ್ಯೂಸ್ ದೊರೆಯುತ್ತದೆ.
ಪಂಜ ಪರಿಸರದಲ್ಲಿ ಆಧುನಿಕತೆಗೆ ಹೊಂದಿಕೊಂಡಂತೆ ಈ ಸಂಸ್ಥೆಯಲ್ಲಿ ಗ್ರಾಹಕರು ಕುಟುಂಬ ಸಮೇತ ಭೇಟಿ ನೀಡಿ ಉಪಹಾರ ಸವಿಯಲು ಮತ್ತು ಬೇಕರಿ ತಿಂಡಿ ತಿನಸು ಖರೀದಿ ಮಾಡಲು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಸುಸಜ್ಜಿತ ಸ್ವೀಟ್ ಸ್ಟಾಲ್, ಜ್ಯೂಸ್ ಸೆಂಟರ್ ಹಾಗೂ ಶುದ್ಧ ಸಸ್ಯಾಹಾರಿ ಚಾಟ್ಸ್ & ಕ್ಯಾಂಟೀನ್ ಮತ್ತು ಕ್ಯಾಟರಿಂಗ್ ವ್ಯವಸ್ಥೆಯೂ ಇರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.