ಕೊಲ್ಲಮೊಗ್ರು ಗ್ರಾ.ಪಂ ಗ್ರಾಮ ಸಭೆ

0

ಆನೆ ದಾಳಿ, ಮೆಸ್ಕಾಂ ಬಿಲ್ ವರ್ಗಾವಣೆ, ಹಕ್ಕು ಪತ್ರ ಬಗ್ಗೆ ನೀರಿನ ಸಮಸ್ಯೆ ಬಗ್ಗೆ ಚರ್ಚೆ

ಕೊಲ್ಲಮೊಗ್ರು ಗ್ರಾ.ಪಂ.ನ ಗ್ರಾಮ ಸಭೆ ಫೆ.20 ರಂದು ಮಯೂರ ಕಲಾ ಮಂದಿರ ಕೊಲ್ಲಮೊಗ್ರು ಇಲ್ಲಿ ನಡೆಯಿತು.

ಸಭೆಯಲ್ಲಿ ಆನೆ ದಾಳಿ, ಮೆಸ್ಕಾಂ ಬಿಲ್ ವರ್ಗಾವಣೆ, ಹಕ್ಕು ಪತ್ರ ಬಗ್ಗೆ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಚಾಂತಾಳ ವಹಿಸಿದ್ದರು. ವೇದಿಕೆಯಲ್ಲಿ ನೊಡೆಲ್ ಅಧಿಕಾರಿಯಾಗಿ ಬಿ.ಇ.ಒ ರಮೇಶ್ ಇದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಅಶ್ವಥ್ ಯಲದಾಳು, ಸದಸ್ಯರುಗಳಾದ ಪುಷ್ಪರಾಜ್ ಪಡ್ಪು, ಶ್ರೀಮತಿ ಮೋಹಿನಿ ಕಟ್ಟ, ಶ್ರೀಮತಿ ಶಿವಮ್ಮ, ಪಿಡಿಒ ಚೆನ್ನಪ್ಪ ನಾಯ್ಕ ಉಪಸ್ಥಿತರಿದ್ದರು. ಪಿಡಿಒ ವರದಿ ವಾಚಿಸಿದರು. ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ ಸ್ವಾಗತಿಸ, ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.