ಪಂಜ ಗ್ರಾಮ ಪಂಚಾಯತ್ 2023-24 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ

0

ಆರೋಗ್ಯ ಇಲಾಖೆ ಮೇಲ್ದರ್ಜೆಗೆ ಏರಿಸಲು ಗ್ರಾಮಸ್ಥರ ತೀವ್ರ ಬೇಡಿಕೆ

ಪಂಜ ಗ್ರಾಮ ಪಂಚಾಯತ್ 2023-24 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಫೆ.21 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಸಭಾಧ್ಯಕ್ಷತೆ ವಹಿಸಿದ್ದರು.

ಅನೇಕ ದಶಕಗಳಿಂದ ಪ್ರತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಗತ್ಯ ಬೇಡಿಕೆಯಾಗಿರುವ ಚರ್ಚೆಯಲ್ಲಿಯೇ ಉಳಿದಿರುವ ಪಂಜ ಹೋಬಳಿ ಕೇಂದ್ರದ ಆರೋಗ್ಯ ಇಲಾಖೆ ಮೇಲ್ದರ್ಜೆಗೆ ಏರಿಸುವುದು ಇನ್ನೂ ಕೈಗೊಂಡಿರದ ಬಗ್ಗೆ ತೀವ್ರ ಚರ್ಚೆ ನಡೆಯಿತು.

ಕಳೆದ 15 ವರುಷಗಳಿಂದ ಗ್ರಾಮ ಸಭೆಯಲ್ಲಿ ಬೇಡಿಕೆ ಇರುವ ಗುಂಡಡ್ಕ ರಸ್ತೆ ಇನ್ನೂ ಸರಿ ಗೊಳ್ಳದಿರುವ ಬಗ್ಗೆ ತೀವ್ರ ಚರ್ಚೆ ನಡೆದು ಸರಿ ಪಡಿಸದಿದ್ದರೆ ಚುನಾವಣೆ ಬಹಿಷ್ಕಾರಿಸುವುದಾಗಿ ಆ ಭಾಗದ ಗ್ರಾಮಸ್ಥರು ಹೇಳಿದರು.

ಪಂಜ ಅಂಚೆ ಕಚೇರಿ ಸ್ವಂತ ಸ್ಥಳದ ವ್ಯಾಜ್ಯದ ಕುರಿತು ಚರ್ಚೆ, ಪಂಜಕ್ಕೆ ವಿಶೇಷ ತಹಶೀಲ್ದಾರ್ ನೇಮಕದ ಬೇಡಿಕೆ,
ಗ್ರಾಮ ಸಭೆಯ ಬೇಡಿಕೆಯನ್ನು ಗ್ರಾಮ ಪಂಚಾಯತ್ ನಿಂದ ಕಳುಹಿಸಿದ ಅರ್ಜಿಗಳಿಗೆ ಸಂಬಂಧ ಪಟ್ಟವರಿoದ ಯಾವುದೇ ಉತ್ತರ ಬರುತ್ತಿಲ್ಲ ಇದನ್ನು ಸರಿ ಪಡಿಸುವಂತೆ, ಪೇಟೆಯಲ್ಲಿ ಹುಚ್ಚು ನಾಯಿ ಹಾವಳಿ ಬಗ್ಗೆ ಗಮನ ಹರಿಸುವಂತೆ,ಮಂಗಗಳ ಹಾವಳಿ,ಕೊಂಟೇಲ್ ಹೊಳೆ ಎಂಬಲ್ಲಿ
ಸಿ ಸಿ ಕ್ಯಾಮೆರಾ ಅಳವಡಿಕೆ , ಪಂಜ ಪೇಟೆ ಸಮೀಪ ಬೈಪಾಸ್ ರಸ್ತೆ ಕಾಂಕ್ರೀಟ್ ನಡೆಸುವಂತೆ , ಗೃಹಲಕ್ಷ್ಮೀ ಯೋಜನೆ ಹಣ ಕೆಲವರಿಗೆ ಬರುತ್ತಿಲ್ಲ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೇಕು, ನೇರಳದಲ್ಲಿ ವಿದ್ಯುತ್ ಲೈನ್, ಚಳ್ಳಕೋಡಿ ಪರಿಸರದಲ್ಲಿ ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ವಿಚಾರಗಳ ಕುರಿತು
ಚರ್ಚೆಗಳು ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಸುಳ್ಯ ಸಹಾಯಕ ಕೃಷಿ ಅಧಿಕಾರಿ ಗುರುಪ್ರಸಾದ್ ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ಸದಸ್ಯರಾದ ಲಕ್ಷ್ಮಣ ಗೌಡ ಬೊಳ್ಳಾಜೆ,
ಶ್ರೀಮತಿ ಪೂರ್ಣಿಮಾ ದೇರಾಜೆ,ಜಗದೀಶ್ ಪುರಿಯ,
ಶ್ರೀಮತಿ ದಿವ್ಯಾ ಪುಂಡಿಮನೆ ,
ಶ್ರೀಮತಿ ನೇತ್ರಾವತಿ ಕಲ್ಲಾಜೆ, ಶ್ರೀಮತಿ ವೀಣಾ, ಶ್ರೀಮತಿ ಪ್ರಮೀಳ ಸಂಪ, ಶ್ರೀಮತಿ ಮಲ್ಲಿಕಾ ಅಳ್ಪೆ,ಚಂದ್ರಶೇಖರ ದೇರಾಜೆ, ಶರತ್ ಕುದ್ವ, ಲಿಖಿತ್ ಪಲ್ಲೋಡಿ, ಕಾರ್ಯದರ್ಶಿ ಗೋಪಾಲಕೃಷ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ ಸ್ವಾಗತಿಸಿದರು ಕಾರ್ಯದರ್ಶಿ ಗೋಪಾಲಕೃಷ್ಣ ವರದಿ ವಾಚಿಸಿದರು.