ಗಾಂಧಿನಗರ ಕೆ.ಪಿ.ಎಸ್.ನಲ್ಲಿ ಇಂಗ್ಲೀಷ್ ಸ್ಫೋಕನ್ ಕ್ಲಾಸ್ ಉದ್ಘಾಟನೆ

0

ಸುಳ್ಯದ ಗಾಂಧಿನಗರ ಕೆ.ಪಿ.ಎಸ್. ನಲ್ಲಿ ಇಂಗ್ಲೀಷ್ ಸ್ಪೋಕನ್ ಕ್ಲಾಸ್ ಇದರ ಉದ್ಘಾಟನಾ ಸಮಾರಂಭವು ಫೆ.10ರಂದು‌ ನಡೆಯಿತು.

ಸಿ.ಆರ್.ಪಿ. ಶ್ರೀಮತಿ ಮಮತಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷ ಚಿದಾನಂದ ಕುದ್ಪಾಜೆ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜು ಪ್ರಾಂಶುಪಾಲ ಸಮದ್, ಉಪಪ್ರಾಂಶುಪಾಲೆ ಜ್ಯೋತಿಲಕ್ಷ್ಮಿ, ಮುಖ್ಯೋಪಾಧ್ಯಾಯರಾದ ಪದ್ಮನಾಭ ಅತ್ಯಾಡಿ, ಸ್ಪೋಕನ್ ಇಂಗ್ಲೀಷ್ ನೋಡೆಲ್ ಶಿಕ್ಷಕಿ ಹೇಮಾವತಿ, ಎಸ್.ಡಿ.ಎಂ.ಸಿ.‌ಸದಸ್ಯ ರಾಮ ಮುರಳಿ ಮೊದಲಾದವರಿದ್ದರು.

ಚಾರ್ವಿ ಸ್ವಾಗತಿಸಿದರು. ದಕ್ಷ ವಂದಿಸಿದರು. ಆಯಿಷತ್ ಸಫ್ವಾನ ಕಾರ್ಯಕ್ರಮ ನಿರೂಪಿಸಿದರು.