ಅಧ್ಯಕ್ಷರಾಗಿ ನಿತೀಶ್, ಕಾರ್ಯದರ್ಶಿಯಾಗಿ ಚಂದ್ರ ಆಯ್ಕೆ
ಬೊಮ್ಮಾರು ಶ್ರೀ ಗಜಾನನ ಮಿತ್ರ ಮಂಡಳಿಯ ಮಹಾಸಭೆ ಮತ್ತು 2025- 26ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ
ಫೆ.24ರಂದು ಬೊಮ್ಮಾರು ಶ್ರೀ ಮೂವರ್ ದೈವಸ್ಥಾನದ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷ ದಿನೇಶ್ ಬೊಮ್ಮಾರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮರ್ಕಂಜ ಅನ್ನಪೂರ್ಣೇಶ್ವರಿ ಯೋಗೇಶ್ವರ ಸಿದ್ಧಮಠದ ಧರ್ಮದರ್ಶಿ ರಾಜೇಶ್ ನಾಥ ಜಿ. ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಪ್ರವೀಣ್ ಕುಮಾರ್, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಧನಂಜಯ ಕುಮಾರ್ ಕೆ, ಹಾಗೂ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2025- 26ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಗೌರವಾಧ್ಯಕ್ಷ ರಾಗಿ ದಿನೇಶ್ ಬೊಮ್ಮರು, ಅಧ್ಯಕ್ಷರಾಗಿ ನಿತೀಶ್ ಎರ್ಮೆಟ್ಟಿ, ಉಪಾಧ್ಯಕ್ಷರಾಗಿ ಪ್ರದೀಪ ಬೊಮ್ಮಾರು, ಕಾರ್ಯದರ್ಶಿಯಾಗಿ ಚಂದ್ರ ಬೊಮ್ಮಾರು ಸಂಘಟನಾ ಕಾರ್ಯದರ್ಶಿಯಾಗಿ ಜೀವನ್ ತುಂಬೆತ್ತಡ್ಕ , ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ ಚಾಕೋಟಿಮೂಲೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಗದೀಶ ಬೊಮ್ಮಾರು , ಖಜಾಂಜಿಯಾಗಿ ಚಕಿತ್ ಬೊಮ್ಮಾರು ಆಯ್ಕೆಯಾದರು.
ಸದಸ್ಯರುಗಳಾಗಿ ಅವಿನಾಶ್ ಎರ್ಮೆಟ್ಟಿ , ಸತೀಶ್ ಬೊಮ್ಮಾರು , ಜಯರಾಮ ದಂಬೆಕೋಡಿ , ವಿಶ್ವನಾಥ ಪೊಯ್ಯಕೋಡಿ , ಪುನೀತ್ ಮುಂಡೋಕಜೆ, ಜನಾರ್ಧನ ಬೊಮ್ಮಾರು, ಸತೀಶ್ ಎರ್ಮೆಟ್ಟಿ , ಸುಬ್ರಹ್ಮಣ್ಯ ಕುದ್ಕುಳಿ ಆಯ್ಕೆಯಾದರು.
ಐತ ರೆಂಜಾಳ ಪ್ರಾರ್ಥಿಸಿ, ಚಂದ್ರ ಬೊಮ್ಮರು ಸ್ವಾಗತಿಸಿದರು.
ನಿತೀಶ್ ಎರ್ಮೆಟ್ಟಿ ವಂದಿಸಿದರು.