ಪ್ರಧಾನಿ ಮೋದಿ ಯುಎಇ ಭೇಟಿ; ಅನಿವಾಸಿ ಭಾರತೀಯ ತಂಡದಿಂದ ಹಲವು ರಾಜ್ಯದ ವೈವಿಧ್ಯಮಯ ನೃತ್ಯಗಳ ಮೂಲಕ ಸ್ವಾಗತ

0

ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವ ವಹಿಸಿದ ಸಂಪಾಜೆಯ ಭಾಗ್ಯರಾಜ್ ರಾವ್ ತಂಡಕ್ಕೆ ಪ್ರಧಾನಿ ಕಛೇರಿಯಿಂದ ಶ್ಲಾಘನೆ

ಪ್ರಧಾನಿ ನರೇಂದ್ರ ಮೋದಿಯವರು ಫೆ.13 ರಂದು ಯುಎಇ ಪ್ರವಾಸದ ಕೈಗೊಂಡ ವೇಳೆ ಅನಿವಾಸಿ ಭಾರತೀಯವರಿಂದ “ಅಹ್ಲಾನ್ ಮೋದಿ” ಎಂಬ ಕಾರ್ಯಕ್ರಮದ ಮೂಲಕ ಸ್ವಾಗತಿಸಲಾಯಿತು. ಝಾಯೆದ್ ಸ್ಪೋರ್ಟ್ಸ್ ಸಿಟಿ ಅಬುಧಾಬಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 40,000 ಕ್ಕೂ ಅಧಿಕ ಭಾರತೀಯರು ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಸಂಪೂರ್ಣ ನೇತೃತ್ವವನ್ನು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕುಯಿಂತೋಡು ಭಾಗ್ಯರಾಜ್ ರಾವ್‌ರವರು ನಿರ್ವಹಿಸಿದ್ದರು. ಪ್ರಧಾನಿಯವರ ಆಗಮನದ ಮುಂಚಿತವಾಗಿ ಹಮ್ಮಿಕೊಂಡಿದ್ದ ಈ ಮನೋರಂಜನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಸುಮಾರು15 ತಂಡಗಳ 500 ರಷ್ಟು ಕಲಾವಿದರು ಎರಡು ಗಂಟೆಗಳ ಕಾಲ ಭಾರತದ ಹಲವು ರಾಜ್ಯಗಳ ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿದರು. ಕರಾವಳಿಯ ಗಂಡು ಕಲೆ ಯಕ್ಷಗಾನ ಸೇರಿದ ಜನರ ಮನ ಸೆಳೆಯಿತು.

ಈ ಕಾರ್ಯಕ್ಕೆ ಭಾಗ್ಯರಾಜ್ ರಾವ್‌ರವರ ತಂಡಕ್ಕೆ ಪ್ರಧಾನಿ ಕಚೇರಿಯಿಂದ ಶ್ಲಾಘನೆ ಲಭಿಸಿದ್ದು , ಇವರು ಕಳೆದ 10ವರ್ಷಗಳಿಂದ ಯುಎಇನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ರಕ್ತದಾನ ಶಿಬಿರ ತಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದ್ದಾರೆ. ಇದರೊಂದಿಗೆ ಇವರ ತಂಡಕ್ಕೆ ದುಬಾಯಿ ಆರೋಗ್ಯ ಕೇಂದ್ರದಿಂದ ಗೌರವ ಕೂಡ ಲಭಿಸಿದೆ.

ಇವರು ಕಲ್ಲುಗುಂಡಿ, ಸಂಪಾಜೆ ಗ್ರಾಮದ ಕುಯಿಂತೋಡು ನಿವಾಸಿ ನಿವೃತ್ತ ಕೆಎಫ್‌ಡಿಸಿ ಉದ್ಯೋಗಿ ಆನಂದ ಹಾಗೂ ಅನಿತಾ ದಂಪತಿಯ ಪುತ್ರ.