ಅರಂತೋಡು: ಒಡಿಯೂರು ಗ್ರಾಮ ವಿಕಾಸ ಯೋಜನೆಯ ಘಟ ಸಮಿತಿ ಉದ್ಘಾಟನೆ

0

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಳ್ಯ ವಲಯದ ತೊಡಿಕಾನ ಅರಂತೋಡು ಗ್ರಾಮದ ನೂತನ ಘಟ ಸಮಿತಿಯನ್ನು ಫೆ.25ರಂದು ಅರಂತೋಡು ಗ್ರಾ.ಪಂ. ಸಭಾಭವನದಲ್ಲಿ ಉದ್ಘಾಟಿಸಲಾಯಿತು.

ಅರಂತೋಡು ರಬ್ಬರ್ ಸೊಸೈಟಿ ಮಾಜಿ ಅಧ್ಯಕ್ಷ ಜತ್ತಪ್ಪ ಮಾಸ್ತರ್ ಅಳಿಕೆ ಅವರು ದೀಪ ಬೆಳಗಿಸುವ ಮೂಲಕ ನೂತನ ಘಟ ಸಮಿತಿಯನ್ನು ಉದ್ಘಾಟಿಸಿದರು.

ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಳ್ಯ ತಾಲೂಕು ಮೇಲ್ವಿಚಾರಕಿಯಾದ ಶ್ರೀಮತಿ ಗೀತಾ ನೆಟ್ಟಾರು, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಸುಹಾಸ್ ಅಲೆಕ್ಕಾಡಿ, ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೂಟ್ಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನೂತನ ಘಟ ಸಮಿತಿಯ ಅಧ್ಯಕ್ಷರಾಗಿ ಚಂದ್ರಶೇಖರ ಆಚಾರ್ಯ ತೊಡಿಕಾನ,
ಉಪಾಧ್ಯಕ್ಷರಾಗಿ ಶ್ರೀಮತಿ ವಾರಿಜಾಕ್ಷಿ, ಕಾರ್ಯದರ್ಶಿಯಾಗಿ ಶ್ರೀಮತಿ ವಿನುತಾ, ಜತೆಕಾರ್ಯದರ್ಶಿಯಾಗಿ ವಿಜಯ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ರಶ್ಮಿಯವರು ಆಯ್ಕೆಯಾದರು.

ವಲಯ ಸಂಯೋಜಕಿ ಶೀಮತಿ ರೇವತಿ, ಗ್ರಾಮ ಸೇವಾ ದೀಕ್ಷಿತಾರಾದ ಶ್ರೀಮತಿ ಲೋಚನಾ, ದಾಖಲಾತಿ ಸಮಿತಿಯವರು ಹಾಗೂ ಎಲ್ಲಾ ವಿಕಾಸ ವಾಹಿನಿ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ರಶ್ಮಿ ಸ್ವಾಗತಿಸಿ, ಶ್ರೀಮತಿ ಪ್ರಮೀಳ ವಂದಿಸಿದರು. ಶ್ರೀಮತಿ ಭವಿ ಕಾರ್ಯಕ್ರಮ ನಿರೂಪಿಸಿದರು.