ಪಂಬೆತ್ತಾಡಿ : ಅನೀಶ್ ಕಲ್ಚಾರು ಇನ್ ಸ್ಪೈಯರ್ ಅವಾರ್ಡ್ ಗೆ ಆಯ್ಕೆ

0

ಪಂಬೆತ್ತಾಡಿ ಸ.ಹಿ.ಪ್ರಾ.ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅನೀಶ್ ಕಲ್ಚಾರು ಇನ್ ಸ್ಪೈಯರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ.

ಅನೀಶ್ ಕಲ್ಚಾರು ವಿದ್ಯುತ್ ಶಕ್ತಿ ಉತ್ಪಾದಕ ಎಂಬ ವಿಜ್ಞಾನ ಮಾದರಿ ತಯಾರಿಸಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕೊಡಮಾಡುವ ಇನ್ ಸ್ಪೈಯರ್ ಆವಾರ್ಡ್ ಗೆ ಆಯ್ಕೆಯಾಗಿದ್ದಾರೆ .

ಇವರು ಸತ್ಯಶಂಕರ ಕಲ್ಚಾರು ಹಾಗೂ ಜ್ಯೋತಿ. ಎಸ್.ಕಲ್ಚಾರು ದಂಪತಿಗಳ ಪುತ್ರ.
ವಿಜ್ಞಾನ ಶಿಕ್ಷಕಿ ಶ್ರೀಮತಿ ಭವ್ಯ ಬಿ ಮಾರ್ಗದರ್ಶನ ನೀಡಿದ್ದಾರೆ.