ಮಾ. 10-11 : ಕೇರ್ಪಡ -ಪಲ್ಲತ್ತಡ್ಕದಲ್ಲಿ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ನೇಮೋತ್ಸವ

0


ಕೇರ್ಪಡ – ಪಲ್ಲತ್ತಡ್ಕ ಮಾ.10 ರಿಂದ 11 ರವರೆಗೆ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ನೇಮೋತ್ಸವವು ನಡೆಯಲಿರುವುದು, ಮಾ.10ನೇ ಆದಿತ್ಯವಾರ ಬೆಳಿಗ್ಗೆ ನಾಗ ತಂಬಿಲ ಅದೇ ದಿನ ಸಂಜೆ 4.30ಕ್ಕೆ ಶ್ರೀ ಮೊಗೇರ್ಕಳ,
ತನ್ನಿ ಮಾನಿಗ ಹಾಗೂ ಕೊರಗಜ್ಜ ದೈವಗಳ ಭಂಡಾರ ತೆಗೆಯುವುದು. ರಾತ್ರಿ 9 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆಯ ಬಳಿಕ ಶ್ರೀ ಆದಿಮೊಗೇರ್ಕಳ ಗರಡಿ ಇಳಿಯುವುದು, ರಾತ್ರಿ 2 ಗಂಟೆಗೆ ತನ್ನಿ ಮಾನಿಗ ಗರಡಿ ಇಳಿದು ರಂಗಪ್ರವೇಶ, ಬೆಳಿಗ್ಗೆ 5 ಗಂಟೆ ಪೂಜಾರಿಗಳಿಗೆ ಸೇಟಾಗುವುದು, ಬೆಳಿಗ್ಗೆ 6 ಗಂಟೆಗೆ ತನಿಮಾನಿಗ, ಮೊಗೇರ್ಕಳ ದೈವಗಳ ಪ್ರಸಾದ ವಿತರಣೆ ಹರಿಕೆ, ಬಳಿಕ 6.30ರಿಂದ ಕೊರಗತನಿಯ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿರುವುದು. ದೈವಗಳ ಭಕ್ತಾದಿಗಳು ಹೆಚ್ಚಿನ ಆರ್ಥಿಕ ಸಹಾಯ ನೀಡುವುದಲ್ಲದೆ, ಅಕ್ಕಿ,ತೆಂಗಿನಕಾಯಿ,ಬಾಳೆ ಎಲೆ, ಹೂ ಹಿಂಗಾರ ಮತ್ತು ತರಕಾರಿಗಳನನ್ನು ಸ್ವೀಕರಿಸಲಾಗುವುದು ಅಲ್ಲದೆ, ಚಿನ್ನ-ಬೆಳ್ಳಿ ಹರಿಕೆ ರೂಪದಲ್ಲಿ ಸಲ್ಲಿಸಬಹುದೆಂದು ಸಮಿತಿ ಪ್ರಕಟಣೆ ತಿಳಿಸಿದೆ.