ಮಕ್ಕಳನ್ನು ಕಾಡುವ ಮಂಗನ ಬಾವು ಸೋಂಕು

0

ಮಕ್ಕಳನ್ನು ಕಾಡುವ ಆರೋಗ್ಯದ ಸಮಸ್ಯೆಗಳಲ್ಲಿ ಮಂಪ್ಸ್ ಅಥವಾ ಮಂಗನಬಾವು ಕೂಡ ಒಂದು.ಇದನ್ನು ವಯಸ್ಕರಲ್ಲಿಯೂ ಸಹ ಕಾಣಬಹುದು. ಈ ರೋಗಕ್ಕೆ ಒಳಗಾದ ವ್ಯಕ್ತಿಯ ಒಂದು ಅಥವಾ ಎರಡು ಕೆನ್ನೆಯ ಭಾಗಗಳು ಓದಿಕೊಳ್ಳುತ್ತವೆ.ಪ್ಯಾರಾಮಿಕ್ಸೊ ವೈರಸ್,ಜೊಲ್ಲು ರಸವನ್ನು ಉತ್ಪಾದಿಸುವ ಪೆರೊಟಿಡ್ ಎಂಬ ಗ್ರಂಥಿಗೆ ದಾಳಿ ಮಾಡುತ್ತದೆ. ಈ ರೋಗಕ್ಕೆ ನಿರ್ದಿಷ್ಟ ಔಷಧಿ ಇಲ್ಲದಿದ್ದರೂ ಸಹ ರೋಗಲಕ್ಷಣವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಸರಿಯಾದ ಆರೈಕೆ ಹಾಗೂ ಚಿಕ್ಕ ವಯಸ್ಸಿನಲ್ಲಿ ಕೊಡುವ ಎಂ.ಎಂ.ಆರ್ ಚುಚ್ಚು ಮದ್ದಿನಿಂದ ನಿಯಂತ್ರಣದಲ್ಲಿರಿಸಬಹುದು.ಮಂಗನ ಬಾವು ಸೋಂಕು ಹಾಗೂ ಇದಕ್ಕೆ ಕಾರಣಗಳುಮಂಗನ ಬಾವು ಅಥವಾ ಕೆಪ್ಪಟರಾಯ ಎಂದು ಆಡು ಮಾತಿನಲ್ಲಿ ಕರೆಸಿಕೊಳ್ಳುವ ಇದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಈ ರೋಗಕ್ಕೆ ಕಾರಣ ಪಾರಮಿಕ್ಸ ವೈರಸ್ ಎಂಬ ಸೂಕ್ಷ್ಮಾಣು. ರೋಗ ಪೀಡಿತ ವ್ಯಕ್ತಿಯನ್ನು ಮುಟ್ಟಿಸಿಕೊಳ್ಳುವುದು, ಅವರು ಕೆಮ್ಮುವುದು ಸೀನುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ವೈರಾಣು ದಾಳಿಯಾದ 7 ರಿಂದ 21 ದಿನಗಳಲ್ಲಿ ರೋಗಲಕ್ಷಣಗಳು ಆರಂಭವಾಗುತ್ತದೆ. ತದನಂತರ,5-10 ದಿನಗಳಲ್ಲಿ ರೋಗ ಲಕ್ಷಣಗಳು ಇಳಿಮುಖವಾಗುತ್ತದೆ.ಮಂಪ್ಸ್ ರೋಗ‌ದ ಲಕ್ಷಣಗಳು:ಆರಂಭದಲ್ಲಿ ಒಂದು ಕೆನ್ನೆ ಮಾತ್ರ ಓದಿಕೊಂಡಿದ್ದು, ಆಮೇಲೆ ಇನ್ನೊಂದು ಕೆನ್ನೆಯು ಓದಿಕೊಳ್ಳುವುದು ಇದರ ಮುಖ್ಯ ಲಕ್ಷಣ. ಕೆನ್ನೆ ಓದಿಕೊಂಡು ಮಂಗನ ಹಾಗೆ ಕಾಣುವುದಕ್ಕೆ ‘ಮಂಗನಬಾವು’ಎಂದು ಕರೆಯುತ್ತಾರೆ. ಕೆಲವರಲ್ಲಿ ,ಸಾಮಾನ್ಯ ಅಥವಾ ಜೋರು ಜ್ವರ ಇರುತ್ತದೆ. ಜೊತೆಗೆ,ಆಯಾಸ,ಮೈ ಕೈ ನೋವು,ತಲೆನೋವು,ಕುತ್ತಿಗೆ ನೋವು,ಹಸಿವು ಕಮ್ಮಿ,ವಾಕರಿಕೆ ಕೂಡ ಇರುತ್ತದೆ.ಮಂಗನ ಬಾವುವಿನ ನಿಯಂತ್ರಣ ಹಾಗೂ ಚಿಕಿತ್ಸೆ:ಇದು ವೈರಲ್ ಇನ್ಫೆಕ್ಷನ್ ಆಗಿರುವುದರಿಂದ, ಇದಕ್ಕೆ ನಿರ್ದಿಷ್ಟ ಔಷಧಿಗಳಿಲ್ಲ.ಆದರೆ,ಇದರಿಂದ ಬರುವ ರೋಗ ಲಕ್ಷಣಗಳಿಗೆ ಔಷಧಿಗಳನ್ನು ನೀಡಿ ಗುಣಪಡಿಸಬಹುದು.ಜ್ವರಕ್ಕೆ ಹಾಗೂ ನೋವಿಗೆ ಸಂಬಂಧಿಸಿದ ಆಂಟಿ ಇನ್ಫ್ಲಮೇಟರಿ ಔಷಧಿಗಳನ್ನು ನೀಡುತ್ತಾರೆ.ಅತಿ ಹೆಚ್ಚು ನೀರನ್ನು ಸೇವಿಸಬೇಕು.ಗಟ್ಟಿ ಪದಾರ್ಥ ಜಗಿಯಲು ಕಷ್ಟವಾಗುವುದರಿಂದ, ದ್ರವರೂಪದ ಆಹಾರ ಅಥವಾ ಮೆದುವಾದ ಆಹಾರವನ್ನು ಸೇವಿಸಬೇಕು.ಹಣ್ಣು ಅಥವಾ ಹಣ್ಣಿನ ಜ್ಯೂಸ್ಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ.ಇದು,ಲಾಲರಸವನ್ನು ಉತ್ಪಾದಿಸಲು ಪ್ರಚೋದಿಸುತ್ತದೆ. ಜೊತೆಗೆ ಹುಳಿ ಪದಾರ್ಥ,ಮಸಾಲ ಪದಾರ್ಥಗಳನ್ನು ಕೂಡ ಸೇವಿಸಬಾರದು.ದಿನಕ್ಕೆರಡು ಬಾರಿ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುತ್ತಿರಿ.ಒಳ್ಳೆ ನಿದ್ರೆ ಜೊತೆಗೆ,ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಿ.ತಣ್ಣೀರಿನ ಪಟ್ಟಿ ಅಥವಾ ಬಿಸಿ ನೀರಿನ ಹಬೆ ರೋಗಲಕ್ಷಣವನ್ನು ಸ್ವಲ್ಪ ಮಟ್ಟಿಗೆಯಾದರೂ ಕಡಿಮೆ ಮಾಡುತ್ತದೆ.ನಿಮ್ಮ ಆಸು ಪಾಸಿನಲ್ಲಿ ಸ್ವಚ್ಛತೆಯನ್ನು ಕಾಪಾಡಿ. ಕೆಮ್ಮುವಾಗ ಅಥವಾ ಸೀನುವಾಗ ಕರ್ಚೀಫ್ ನಿಂದ ಮುಖವನ್ನು ಮುಚ್ಚಿಕೊಳ್ಳಿ.ಮಂಗನ ಬಾವು ಚಿಕಿತ್ಸೆಗೆ ಚುಚ್ಚುಮದ್ದು:*ಒಮ್ಮೆ ಮಂಗಳಬಾವು ಸೋಂಕು ಬಂದು ವಾಸಿಯಾದರೆ, ಮತ್ತೊಮ್ಮೆ ಬರುವುದಿಲ್ಲ ಎನ್ನುತ್ತಾರೆ. ಏಕೆಂದರೆ ನಮ್ಮ ಶರೀರದಲ್ಲಿ ಅದರ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿ ಹುಟ್ಟುತ್ತದೆ. ಹಾಗೆ,ಈ ರೋಗಕ್ಕೆ ಎಂ.ಎಂ.ಆರ್ ಎಂಬ ಲಸಿಕೆ ಲಭ್ಯವಿದೆ.ಇದು,ಶೇಕಡ 90 ರಷ್ಟು ಪರಿಣಾಮಕಾರಿ. ಎಂ.ಎಂ.ಆರ್ ವ್ಯಾಕ್ಸಿನ್ ಮೀಸೆಲ್ಸ್, ಮಂಪ್ಸ್,ದಡಾರ ಈ ಮೂರು ವೈರಸ್ ಗಳ ವಿರುದ್ಧ ರಕ್ಷಣೆ ನೀಡುತ್ತದೆ.ನಂತರದ ಸಮಸ್ಯೆಗಳು:ಮಂಗನ ಬಾವು ಸಾಮಾನ್ಯ ಜ್ವರ ನೋವಿಗೆ ಮಾತ್ರ ಸೀಮಿತವಲ್ಲದೆ,ಕೆಲವೊಂದು ಬಾರಿ ಗಂಭೀರ ಸಮಸ್ಯೆಯನ್ನು ತರುತ್ತದೆ. ಇದು ಮೆದುಳಿನ ಸೋಂಕು,ಮೇದೋಜೀರಕ ಗ್ರಂಥಿಯ ಉರಿಯೂತ, ಹೃದಯದ ಉರಿಯುತ, ಕಿಡ್ನಿಯ ಉರಿಯೂತ, ಶಾಶ್ವತ ಕಿವುಡುತನ ಮುಂತಾದ ಅಪಾಯಗಳನ್ನು ತರುತ್ತದೆ.ಮಂಪ್ಸ್ ವೈರಸ್, ಗಂಡು ಮಕ್ಕಳಲ್ಲಿ ವೃಷಣಕ್ಕೆ ಹೋಗಿ ದಾಳಿ ಮಾಡಿ,ಅದರ ಉರಿಯುತ ಮಾಡುತ್ತದೆ.ಇದು ಮುಂದೆ ಇಂಥವರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ.ಇದೇ ರೀತಿ ಹೆಣ್ಣು ಮಕ್ಕಳಲ್ಲಿ ಅಂಡಾಶಯದ ಉರಿಯುತವನ್ನು ಮಾಡುತ್ತದೆ.ಮಂಗನ ಬಾವು ಮಾರಣಾಂತಿಕ ಸಮಸ್ಯೆ ಏನಲ್ಲ.ಆದರೆ ಕಡೆಗಣಿಸದೆ ಸೂಕ್ತವಾದ ಚಿಕಿತ್ಸೆ ತೆಗೆದುಕೊಂಡರೆ ಯಾವುದೇ ಅಪಾಯ ಆಗದೆ ವಾಸಿಯಾಗುತ್ತದೆ.ಡಾ|| ಗ್ರೀಷ್ಮಾ ಗೌಡ ಆರ್ನೋಜಿವೈದ್ಯರು, ಹೊಯ್ಸಳ ಹೆಲ್ತ್ ಕೇರ್ ಮೂಡಿಗೆರೆ