ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕೊಡಿಯಾಲ, ಕಲ್ಲಗದ್ದೆ ಇದರ 49ನೇ ವಾರ್ಷಿಕೋತ್ಸವ ಮಾ. 5ರಂದು ಜರಗಲಿದ್ದು, ಇದರ ಅಂಗವಾಗಿ ಜ. 25ರಿಂದ ನಗರಭಜನೆಗೆ ಆರಂಭಗೊಂಡಿತ್ತು.
ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತೀವರ್ಷ ಕೊಡಿಯಾಲ ಗ್ರಾಮದ ಪ್ರತೀ ಮನೆಗಳಿಗೆ ತೆರಲಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಾ. 2ರಂದು ಭಜನಾ ಸಮಾರೋಪ ನಡೆಯಲಿದೆ. ಸಂಜೆ 5.45 ಕ್ಕೆ ಶ್ರೀಮತಿ ತ್ರಿವೇಣಿ ಬಾಳಿಲ, ಶ್ರೀಮತಿ ವಿಮಲಾ ಡಿ. ರೈ ಪರಾರಿ, ಶ್ರೀಮತಿ ಅರುಣಾಕ್ಷಿ ನಿಡ್ಮಾರು, ಚಂದ್ರಾವತಿ ಕಲ್ಲುಗದ್ದೆ ಮತ್ತು ಬೇಬಿ ಶಾಲಿನಿ ಕಲ್ಲುಗದ್ದೆ ಭಜನಾ ಕಾರ್ಯಕ್ರಮದ ದೀಪ ಬೆಳಗಿದಲಿದ್ದಾರೆ. ಬಳಿಕ ಭಜನಾರಂಭಗೊಳ್ಳಲಿದೆ. ಸಂಜೆ ಸಂಜೆ 7.00 ಗಂಟೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪುತ್ಯರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾಮಕೃಷ್ಣ ಕಾಟುಕುಕ್ಕೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶಶಿಕುಮಾರ್ ಭಟ್ ಪಡಾರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕಡ್ಯ ವಾಸುದೇವ ಭಟ್, ಬಿ. ಅಶೋಕ್ ಪೈ, ವಿಶ್ವನಾಥ ರೈ ತಡಗಜೆ ಮತ್ತು ತಿರುಮಲೇಶ್ವರ ಭಟ್ ಕುರಿಯಾಜೆಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಸಂಜೆ 6.00 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆಗೆ ಪ್ರಾರ್ಥನೆ ನಡೆದು ಸಭಾ ಕಾರ್ಯಕ್ರಮದ ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ಮಾ. 3ರಂದು ಮುಂಜಾನೆ 6.15 ಕ್ಕೆ ಭಜನಾ ಮಂಗಳೋತ್ಸವ ನಡೆಯಲಿದೆ ಭಜನಾಸಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಭಜನಾ ಮಂಡಳಿಯ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಕೊಡಿಯಾಲ ತಿಳಿಸಿದ್ದಾರೆ.